ಬೆಂಗಳೂರು: ಇಂಧನ ವೆಚ್ಚದಲ್ಲಿ ಹೆಚ್ಚಳದಿಂದ ಆರ್ಥಿಕ ವೆಚ್ಚ ಅಧಿಕವಾಗುತ್ತಿದ್ದು ಎಲೆಕ್ಟಾನಿಕ್ ವಾಹನಗಳಿಗೆ ಬದಲಾಗುವುದು ಅಗತ್ಯವಾಗಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಾ.ಎನ್.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್, ಐಟಿ / ಬಿಟಿ ಖಾತೆ ಹೊಂದಿರುವ ಸಚಿವರು “ಗ್ಲೋಬಲ್ ಟೆಕ್ನಾಲಜಿ ಗವರ್ನನ್ಸ್ ಶೃಂಗಸಭೆ 2021” ನ ಅಂಗವಾಗಿ ವಿಶ್ವ ಆರ್ಥಿಕ ವೇದಿಕೆಯಿಂದ ರೂಪಿಸಲ್ಪಟ್ಟ ‘Governing Goods on the Move’ ನಲ್ಲಿ ವರ್ಚುವಲ್ ಉಪಸ್ಥಿತಿಯ ಮೂಲಕ ಮಾತನಾಡಿದ್ದಾರೆ. ಇಂಧನಗಳು ತ್ವರಿತವಾಗಿ ಕ್ಷೀಣಿಸುತ್ತಿರುವುದು, ವೆಚ್ಚಹೆಚ್ಚಳ, ಪರಿಸರದ ಮೇಲೆ ಸಾರಿಗೆಯ ಪ್ರಭಾವ ಮತ್ತು ಡಿಜಿಟಲ್ ಹಸ್ತಕ್ಷೇಪದಿಂದಾಗಿ ಎಲೆಕ್ಟ್ರಾನಿಕ್ ವಾಹನಗಳಿಗೆ ಬದಲಾಗುವುದು ಹಿಂದೆಂದಿಗಿಂತಲೂ ಅಗತ್ಯವಾಗಿದೆ. ಕೈಗಾರಿಕೆಗಳು, ಸರ್ಕಾರಗಳು ಮತ್ತು ಆರಂಭಿಕ ಅಳವಡಿಕೆದಾರರು ಎಲೆಕ್ಟ್ರಿಕ್ ವಾಹನಗಳು ಅವರಿಂದ ನಿರೀಕ್ಷಿಸಿದ ಪ್ರಾಯೋಗಿಕತೆ, ಸುಸ್ಥಿರತೆ, ಸುರಕ್ಷತೆ ಮತ್ತು ಕೈಗೆಟುಕುವ ಗುಣಲಕ್ಷಣಗಳನ್ನು ತಲುಪಿಸಬಲ್ಲವು ಎಂಬುದನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ವಿವರಿಸಿದರು.
“ಕರ್ನಾಟಕ ಸರ್ಕಾರವು ಕೊನೆಯ ಹಂತದವರೆಗಿನ ವಿತರಣೆ/ ಲಾಜಿಸ್ಟಿಕ್ಸ್ / ಪ್ರಯಾಣಿಕ ಇವಿ (ಎಲೆಕ್ಟ್ರಿಕ್ ವೆಹಿಕಲ್) ಅಳವಡಿಕೆಗೆ ಹೆಚ್ಚಿನ ಮಹತ್ವ ನೀಡಲಿದೆ.ಮೊಬೈಲ್ ಇಂಟರ್ನೆಟ್, ಆಟೊಮೇಷನ್, ವಸ್ತುಗಳ ಇಂಟರ್ನೆಟ್ (ಐಒಟಿ), ಕ್ಲೌಡ್ ಕಂಪ್ಯೂಟಿಂಗ್, ಸುಧಾರಿತ ಜೀನೋಮಿಕ್ಸ್, ನವೀಕರಿಸಬಹುದಾದ ಶಕ್ತಿಯು ನಾವೀನ್ಯತೆ ಮತ್ತು ತಂತ್ರಜ್ಞಾನದ ಕೆಲವು ಕ್ಷೇತ್ರಗಳಾಗಿವೆ, ಅವುಗಲನ್ನು ಸಾಂಪ್ರದಾಯಿಕ ಕಾರ್ಯಚಟುವಟಿಕೆಯ ವಿಧಾನಗಳಲ್ಲಿ ಬದಲಾವಣೆಗಳನ್ನು ತರಲು ಅಳವಡಿಸಿಕೊಳ್ಳಬೇಕಾಗಿದೆ.
ಇದಲ್ಲದೆ, ಸರ್ಕಾರವು ದೀರ್ಘಕಾಲದಿಂದ ಬಾಕಿ ಉಳಿದಿರುವ ಉಪನಗರ ರೈಲು ಯೋಜನೆಯನ್ನು ತ್ವರಿತವಾಗಿ ಮುಗಿಸಲಿದೆ.ಬೆಂಗಳೂರಿನಲ್ಲಿ ಮೆಟ್ರೋ ರೈಲು ಜಾಲವನ್ನು ವಿಸ್ತರಿಸಿದೆ ಇಲ್ಲಿ ಒದಗಿಸಲಾಗುವ ಬಾಡಿಗೆ ಸೈಕಲ್ಗಳು ಮತ್ತು ಬೈಕ್ಗಳಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು , ಅವರು ಮಾಹಿತಿ ನೀಡಿದರು.
Follow us on Social media