- ಸುಳ್ಯ : ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಬಸ್ ಹಾಗೂ ಬೈಕ್ ಮಧ್ಯೆ ನಿನ್ನೆ ರಾತ್ರಿ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೃತ ಯುವಕ ಕಬಕ ಮೂಲದ ಬೊಳಿಯ ಮೂಲೆ ನಿವಾಸಿ ರೋಹಿತ್ ಎಂದು ಗುರುತಿಸಲಾಗಿದೆ.
ಬಸ್ ಹಾಗೂ ಬೈಕ್ ಮಧ್ಯೆ ನಿನ್ನೆ ರಾತ್ರಿ ಅಪಘಾತ ನಡೆದಿದ್ದು, ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಾಯಗೊಂಡ ಬೈಕ್ ಸವಾರ ನಿನ್ನೆ ತಡರಾತ್ರಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
Follow us on Social media