ಬೆಂಗಳೂರು : ಸುರೇಶ್ ಪೂಜಾರಿಯೇ ತನಗೆ ಎಲ್ಲಾ ನಟ, ರಾಜಕಾರಣಿ, ಉದ್ಯಮಿಗಳ ಕುರಿತು ಮಾಹಿತಿ ನೀಡುತ್ತಿದ್ದ ಎಂದು ಸಿಸಿಬಿ ವಿಚಾರಣೆ ವೇಳೆ ಭೂಗತ ಪಾತಕಿ ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.
ಸುರೇಶ್ ಪೂಜಾರಿ, ಫೋನ್ ನಂಬರ್‌ಗಳನ್ನು ಸಂಗ್ರಹಿಸಿ ತನಗೆ ನೀಡುತ್ತಿದ್ದ. ಈ ಸಂದರ್ಭದಲ್ಲಿ ಸುರೇಶ್ ಪೂಜಾರಿ ಬಳಿ ಅವರ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೆ ಎಂದು ರವಿ ಪೂಜಾರಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಉದ್ಯಮಿ, ರಾಜಕಾರಣಿ, ನಟರ ಬಗ್ಗೆ ಸುರೇಶ್ ಪೂಜಾರಿ ಮಾಹಿತಿ ನೀಡಿದ ನಂತರ ತಾನು ಕರೆ ಮಾಡಿ ಅವರನ್ನು ಹೆದರಿಸುತ್ತಿದ್ದೆ ಎಂದು ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.
Source : UNI
Follow us on Social media