Breaking News

ಸಾಲದ ಮೇಲಿನ ಇಎಂಐ ಪಾವತಿ ಆ.31ರವರೆಗೆ ವಿಸ್ತರಣೆ:ಆರ್ ಬಿಐ

ಮುಂಬೈ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಮತ್ತೆ ಸಾಲದ ಮೇಲೆ ಇಎಂಐ ಪಾವತಿದಾರರಿಗೆ ಕೊಂಚ ನಿಟ್ಟುಸಿರು ಬಿಡುವ ಸಿಹಿ ಸುದ್ದಿ ನೀಡಿದೆ.

ಸಾಲದ ಮೇಲಿನ ಇಎಂಐ ಪಾವತಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದೆ.ಈ ಮೊದಲು ಮಾರ್ಚ್‌ 1ರಿಂದ ಮೇ 31ರವರೆಗೆ ಇಎಂಐ ಪಾವತಿ ಅವಧಿಯನ್ನು ಮುಂದೂಡಲಾಗಿತ್ತು. ಇದೀಗ ಆರ್‌ಬಿಐ ಮತ್ತೊಮ್ಮೆ ಇಎಂಐ ಪಾವತಿ ಅವಧಿಯನ್ನು ಮುಂದೂಡಿದೆ. ಇದರಿಂದ ಲಾಕ್‌ಡೌನ್‌ ಸಂಕಷ್ಟಕ್ಕೆ ಒಳಗಾಗಿರುವ ಲಕ್ಷಾಂತರ ಮಂದಿಗೆ ಅನುಕೂಲವಾದಂತಾಗಿದೆ. ಗೃಹ ಸಾಲ ಸೇರಿದಂತೆ ವಿವಿಧ ಸಾಲ ಪಡೆದು ಇಎಂಐ ಪಾವತಿಸುವವರಿಗೆ ಕೊಂಚ ಆರ್ಥಿಕ ಹೊರೆ ಸದ್ಯದ ಮಟ್ಟಿಗೆ ಇಳಿಕೆಯಾಗಲಿದೆ.

ಬಡ್ಡಿಗಿಲ್ಲ ವಿನಾಯ್ತಿ: ರಿಸರ್ವ್ ಬ್ಯಾಂಕ್ ಎಲ್ಲಾ ರೀತಿಯ ಸಾಲಗಳ ಮರುಪಾವತಿಯ 3 ತಿಂಗಳ ಕಂತುಗಳನ್ನು ಮುಂದೂಡಿದೆ. ಅದು ಇಎಂಐ ಪಾವತಿಗೆ ಮಾತ್ರ ನೀಡಲಾಗಿರುವ ಅವಧಿ ವಿಸ್ತರಣೆಯೇ ಹೊರತು ಬಡ್ಡಿದರಕ್ಕೆ ಅಲ್ಲ. ಈ 3 ತಿಂಗಳ ಅವಧಿಗೆ ಗ್ರಾಹಕರು ಬಡ್ಡಿ ಪಾವತಿಸಬೇಕಾಗುತ್ತದೆ.

ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ವಲಯದಲ್ಲಿ, ಹಣದುಬ್ಬರ ಅನಿಶ್ಚಿತತೆ ತಲೆದೋರಿದ್ದು ಭವಿಷ್ಯದಲ್ಲಿ ಏನಾಗಬಹುದು ಎಂಬ ಆತಂಕ ಎದುರಾಗಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆರ್ ಬಿಐ ಹಲವು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಹಣದ ನಿರ್ವಹಣೆ ಅತ್ಯಗತ್ಯವಾಗಿದೆ.

ಆರ್ ಬಿಐ ತೆಗೆದುಕೊಂಡಿರುವ ಕ್ರಮಗಳನ್ನು 4 ವರ್ಗಗಳಾಗಿ ಮಾಡಲಾಗಿದೆ. ಅವುಗಳು-
1. ಮಾರುಕಟ್ಟೆಗಳ ಕಾರ್ಯಚಟುವಟಿಕೆಯನ್ನು ಸುಧಾರಿಸುವುದು
2. ರಫ್ತು ಮತ್ತು ಆಮದುಗಳನ್ನು ಬೆಂಬಲಿಸುವುದು
3. ಸಾಲ ಸೇವೆಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಒತ್ತಡವನ್ನು ಸರಾಗಗೊಳಿಸುವುದು.
4. ಕಾರ್ಯನಿರತ ಬಂಡವಾಳಕ್ಕೆ ಉತ್ತಮ ಪ್ರವೇಶವನ್ನು ನೀಡಿ, ರಾಜ್ಯ ಸರ್ಕಾರಗಳು ಎದುರಿಸುತ್ತಿರುವ ಹಣಕಾಸಿನ ನಿರ್ಬಂಧಗಳನ್ನು ಸರಾಗಗೊಳಿಸುವುದು.

ಹಣಕಾಸು ವ್ಯವಸ್ಥೆಯನ್ನು ಬೆಂಬಲಿಸಲು ವಿತ್ತೀಯ ನೀತಿಯನ್ನು ಸುಗಮಗೊಳಿಸಲು ಆರ್ ಬಿಐ ಸಿದ್ದವಿದೆ ಎಂದ ಶಕ್ತಿಕಾಂತ್ ದಾಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆ ಕುಸಿತದ ಹಾದಿಯಲ್ಲಿಯೇ ಸಾಗುವ ನಿರೀಕ್ಷೆಯಿದೆ, ಇದಕ್ಕೆ ನಾವು ಸಿದ್ದರಾಗಿದ್ದೇವೆ ಎಂದರು.

ಅಮೆರಿಕ ಡಾಲರ್ ಸ್ವಾಪ್ ಸೌಲಭ್ಯವನ್ನು ಪಡೆಯಲು ಆರ್ ಬಿಐ ಎಕ್ಸಿಮ್ ಬ್ಯಾಂಕುಗಳಿಗೆ 15 ಸಾವಿರ ಕೋಟಿ ರೂಪಾ.ಯಿಗಳನ್ನು ನೀಡಿದೆ. ಇದು ಒಂದು ವರ್ಷದವರೆಗೆ ರೋಲ್ಓವರ್ ಸೌಲಭ್ಯವಾಗಿದೆ. 90 ದಿನಗಳ ಅವಧಿ ಸಾಲ ಸೌಲಭ್ಯಕ್ಕೆ ಆರ್ ಬಿಐ 90 ದಿನಗಳ ವಿಸ್ತರಣೆ ನೀಡಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×