ಜೊಹಾನ್ಸ್ಬರ್ಗ್ : ಇದೇ ವರ್ಷ ಶ್ರೀಲಂಕಾ ವಿರುದ್ಧದ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಕಮ್ಬ್ಯಾಕ್ ಮಾಡುವ ಎಲ್ಲಾ ಸಾಧ್ಯತೆ ಯಿದ್ದು, ಜೂನ್ 1ರ ಒಳಗಾಗಿ ಎಲ್ಲಾ ಆಟಗಾರರು ತಮ್ಮ ಲಭ್ಯತೆ ಸ್ಪಷ್ಟ ಪಡಿಸಬೇಕು ಎಂದು ತಂಡದ ಕೋಚ್ ಮಾರ್ಕ್ ಬೌಷರ್ ಗಡುವು ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗಷ್ಟೇ ನಡೆದ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ 36 ವರ್ಷದ ಅನುಭವಿ ಬ್ಯಾಟ್ಸ್ಮನ್ ಸ್ಥಾನ ಪಡೆದಿರಲಿಲ್ಲ. ಆದರೆ, ಮುಂಬರುವ ಟಿ20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯುವುದನ್ನು ಎದುರು ನೋಡುತ್ತಿರುವ ಡಿವಿಲಿಯರ್ಸ್, ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಮತ್ತು ಆಲ್ರೌಂಡರ್ ಕ್ರಿಸ್ ಮಾರಿಸ್ಗೆ ಜೂನ್ 1ರ ಒಳಗಾಗಿ ತಮ್ಮ ಲಭ್ಯತೆ ಸ್ಪಷ್ಟ ಪಡಿಸುವಂತೆ ಗಡುವು ನೀಡಲಾಗಿದೆ.
Source : UNI
Follow us on Social media