ಮಂಡ್ಯ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಗಾರ್ಮೆಂಟ್ ಉದ್ಯಮದ ಮೇಲೆ ತೀವ್ರ ರೀತಿಯ ಹೊಡೆತ ಬಿದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಗಾರ್ಮೆಂಟ್ ಕಂಪನಿಯೊಂದು ತನ್ನ 1200 ಕಾರ್ಮಿಕರನ್ನು ಕೆಲಸದಿಂದಲೇ ತೆಗೆದುಹಾಕಿದೆ.
ಆಡಳಿತ ಮಂಡಳಿ ಈ ನಿರ್ಧಾರವನ್ನು ಖಂಡಿಸಿ ನೂರಾರು ಕಾರ್ಮಿಕರು ಟಿಬಿ ರಸ್ತೆಯಲ್ಲಿರುವ ಗೋಕಲದಾಸ್ ಎಕ್ಸ್ ಪೋರ್ಟ್ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮಹಿಳೆ ಪೂರ್ಣಿಮಾ, ಮಾರ್ಚ್ 23ರಿಂದ ಈವರೆಗೂ ಕೇವಲ ಅರ್ಧ ದಿನದ ವೇತನ ನೀಡಲಾಗುತ್ತಿದೆ. ನಾಳೆ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಸಭೆ ಇದೆ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಬೇಕಾಯಿತು ಎಂದು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸ್ವರೂಪ್ ಹೇಳಿದರು.
ಇದು ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್ (25) ಎಂನ್ನು ಉಲ್ಲಂಘಿಸಿದೆ. ಕಾರ್ಮಿಕರಿಗೆ ಅರ್ಧ ವೇತನ ನೀಡಿದರೆ ಕಾರ್ಖಾನೆ ನಡೆಯುತ್ತಿಲ್ಲ ಎಂಬರ್ಥವಾಗುತ್ತದೆ. ಇದು ಕಾರ್ಖಾನೆ ಮುಚ್ಚಲು ಕಾರಣವಾಗಬಹುದು ಎಂದು ಗಾರ್ಮೆಂಟ್ ಅಸೋಸಿಯೇಷನ್ ಟ್ರೇಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಆರ್. ಪ್ರತಿಭಾ ತಿಳಿಸಿದರು.
Follow us on Social media