ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭರವಸೆಯ ಅಭ್ಯರ್ಥಿ ಜೋ ಬಿಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟೆಸ್ಲಾ ಸಿಇಒ ಎಲೋನ್ ಮಸ್ಕ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹಾಗೂ ಇನ್ನಿತರೆ ಹಲವು ಉನ್ನತ ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳನ್ನು ಸೈಬರ್ ಕಳ್ಲರು ಏಕಕಾಲಕ್ಕೆ ಹ್ಯಾಕ್ ಮಾಡಿದ್ದಾರೆ. ಇದೊಂದು ಕ್ರಿಪ್ಟೋಕರೆನ್ಸಿ ಹಗರಣ ಎಂಬಂತೆ ಕಾಣಿಸಿದೆ.
ದಿ ವರ್ಜ್ ಪ್ರಕಾರ, ಟೆಸ್ಲಾ ಸಿಇಒ ಅವರ ಖಾತೆಯು ಬುಧವಾರ ಮಧ್ಯಾಹ್ನ 4.17 ಕ್ಕೆ ವಿಚಿತ್ರವೆನಿಸುವ ಟ್ವೀಟ್ ಮಾಡಿದೆ. “‘ಕೋವಿಡ್ -19 ಕಾರಣ ನಾನು ಉದಾರವಾಗಿದ್ದೇನೆ. ಮುಂದಿನ ಒಂದು ಗಂಟೆಯವರೆಗೆ ನನ್ನ ಬಿಟಿಸಿ ವಿಳಾಸಕ್ಕೆ ಕಳುಹಿಸಿದ ಯಾವುದೇ ಬಿಟಿಸಿ ಪಾವತಿಯನ್ನು ನಾನು ದ್ವಿಗುಣಗೊಳಿಸುತ್ತೇನೆ., ಅದೃಷ್ಟ ಪರೀಕ್ಷಿಸಿ ಹಾಗೂ ಸುರಕ್ಷಿತವಾಗಿರಿ! ” ಎಂದು ಟ್ವೀಟ್ ಹೇಳಿದೆ.
ಟ್ವೀಟ್‌ನಲ್ಲಿ ಬಿಟ್‌ಕಾಯಿನ್ ವಿಳಾಸವೂ ಇದೆ, ಬಹುಶಃ ಇದು ಹ್ಯಾಕರ್‌ನ ಕ್ರಿಪ್ಟೋ ವ್ಯಾಲೆಟ್‌ಗೆ ಸಂಬಂಧಿಸಿದೆ. ಆದರೆ ಕೆಲ ಕ್ಷಣಗಳಲ್ಲಿ ಟ್ವೀಟ್ ಅನ್ನು ಅಳಿಸಲಾಗಿದೆ ಮತ್ತು ಅದರ ಬದಲು ಇನ್ನೊಂದನ್ನು ಪ್ರಚಾರಕ್ಕೆಂಬತೆ ಹಾಕಲಾಗಿದೆ.
‘ನನ್ನ ಬಿಟಿಸಿ ವಿಳಾಸಕ್ಕೆ ಕಳುಹಿಸಲಾದ ಎಲ್ಲಾ ಪಾವತಿಗಳನ್ನು ಕೃತಜ್ಞತೆಯಿಂದ ದ್ವಿಗುಣಗೊಳಿಸುತ್ತಿದ್ದೇನೆ. ನೀವು $ 1,000 ಕಳುಹಿಸಿ, ನಾನು $ 2,000 ವಾಪಸ್ ಕಳುಹಿಸುತ್ತೇನೆ! ಈ ಆಫರ್ ಮುಂದಿನ 30 ನಿಮಿಷಗಳವರೆಗೆ ಮಾತ್ರ!!, ‘ಅಳಿಸುವ ಮುನ್ನ ಈ ಟ್ವೀಟ್ ಹೇಳಿದೆ.
ಬಿಲ್ ಗೇಟ್ಸ್ ಟ್ವೀಟ್ ಸಹ ಮೇಲಿನಂತೆಯೇ ಇದ್ದು ನಂತರ ಅದನ್ನು ಅಳಿಸಲಾಗಿದೆ.ಎರಡೂ ಖಾತೆಗಳು ಹಗರಣದ ಸಂಬಂಧ ಇದ್ದು ಟ್ವೀಟ್ ಮಾಡುವುದು ಪ್ರಚಾರ ಮಾಡುವುದು, ಅಳಿಸುವುದು ನಿರಂತರವಾಗಿ ನಡೆದಿದೆ. ಆಪಲ್, ಉಬರ್, ಕಾನ್ಯೆ ವೆಸ್ಟ್ ಮತ್ತು ಮೈಕ್ ಬ್ಲೂಮ್‌ಬರ್ಗ್‌ನ ಖಾತೆಗಳನ್ನು ಸಹ ಹ್ಯಾಕ್ ಮಾಡಲಾಗಿದೆ ಮತ್ತುವ್ಯಾಪಕವಾಗಿ ಟ್ವೀಟ್ ಗಳು ಹರಿದಾಡುತ್ತಿದೆ.ಆದರೆ ಇದು ಪ್ರಮುಖ ಕಂಪನಿಗಳು ಮತ್ತು ಅತ್ಯಂತ ಉನ್ನತ ವ್ಯಕ್ತಿಗಳ ಮೇಲೆ ಮಾತ್ರ ಹ್ಯಾಕರ್ ಗಳ ಪರಿಣಾಮ ಉಂಟಾಗುತ್ತಿದೆ.
‘ಟ್ವಿಟ್ಟರ್ನಲ್ಲಿ ಖಾತೆಗಳ ಮೇಲೆ ಪರಿಣಾಮ ಬೀರುವ ಭದ್ರತಾ ಆತಂಕದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಎಲ್ಲರನ್ನೂ ಶೀಘ್ರದಲ್ಲೇ ನವೀಕರಿಸುತ್ತೇವೆ. ಘಟನೆಯ ನಂತರ , ಟ್ವಿಟರ್ ಸಪೋರ್ಟ್ ಕಡೆಯಿಂದ ಮೊದಲ ಪ್ರತಿಕ್ರಿಯೆ ಬಂದಿದೆ.
ಭಾರಿ ಹ್ಯಾಕರ್ ದಾಳಿಯ ನಂತರ ಕೆಲವು ಖಾತೆಗಳಿಗೆ ಹೊಸ ಟ್ವೀಟ್‌ಗಳನ್ನು ಕಳುಹಿಸುವ ಅವಕಾಶವನ್ನು ಟ್ವಿಟರ್ ನಿಲ್ಲಿಸಿದೆ.
‘ನಾವು ಘಟನೆಯನ್ನು ಪರಿಶೀಲಿಸುವಾಗ ಮತ್ತು ಪರಿಹರಿಸುವಾಗ ನಿಮ್ಮ ಪಾಸ್‌ವರ್ಡ್ ಅನ್ನು ಟ್ವೀಟ್ ಮಾಡಲು ಅಥವಾ ಮರುಹೊಂದಿಸಲು ನಿಮಗೆ ಸಾಧ್ಯವಾಗದಿರಬಹುದು’ ಎಂದು ಟ್ವಿಟರ್ ಸಪೋರ್ಟ್ ಟ್ವೀಟ್ ನಲ್ಲಿ ಹೇಳಿದೆ.
‘ನಾವು ಇದನ್ನು ಪರಿಶೀಲಿಸುವಾಗ ಟ್ವೀಟ್ ಮಾಡುವ ಸಾಮರ್ಥ್ಯ, ನಿಮ್ಮ ಪಾಸ್‌ವರ್ಡ್ ಅನ್ನು ಮರುಹೊಂದಿಸುವುದು ಮತ್ತು ಇತರ ಕೆಲವು ಖಾತೆ ಕಾರ್ಯಗಳನ್ನು ಸೀಮಿತಗೊಳಿಸುತ್ತಿದ್ದೇವೆ. ನಿಮ್ಮ ತಾಳ್ಮೆಗೆ ನಮ್ಮ ಧನ್ಯವಾದಗಳು’
ಟ್ವಿಟರ್‌ನ ಪರಿಶೀಲನಾ ವ್ಯವಸ್ಥೆಯು ‘ಸಾರ್ವಜನಿಕ ಹಿತಾಸಕ್ತಿಯ ಖಾತೆ ಅಧಿಕೃತ’ ಎಂದು ಬಳಕೆದಾರರಿಗೆ ತಿಳಿಸಲು ಬ್ಲೂ ಟಿಕ್ ಅನ್ನು ನೀಡುತ್ತದೆ.
Follow us on Social media