ಬೆಂಗಳೂರು: ಶಬ್ನಮ್ ಡೆವಲಪರ್ಸ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ಮತ್ತು ಭೂಗತ ಪಾತಕಿ ರವಿ ಪೂಜಾರಿಗೆ ಜಾಮೀನು ನೀಡಲು ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ಕುಮಾರ್, ಅರ್ಜಿದಾರರನ್ನು ಇತರ ಪ್ರಕರಣಗಳಲ್ಲಿ ದೋಷಮುಕ್ತವಾಗಿಸಲಾಗಿದೆ ಎಂಬ ಕಾರಣಕ್ಕೆ ಆತ ದೋಷಿ ಅಲ್ಲ ಎಂದು ತೀರ್ಮಾನಿಸಲಾಗದು ಎಂದು ಸ್ಪಷ್ಟಪಡಿಸಿದೆ.
ರವಿ ಪೂಜಾರಿ ವಿರುದ್ಧ ಹಲವು ಪ್ರಕರಣಗಳು ಬಾಕಿ ಇವೆ. ಜಾಮೀನು ನೀಡಿದರೆ ತನಿಖೆಗೆ ಸಹಕರಿಸದಿರುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Follow us on Social media