ಬೆಂಗಳೂರು : ಸ್ಯಾಂಡಲ್‍ವುಡ್‍ನ ಖ್ಯಾತ ಖಳನಟ ರಾಜ್ ದೀಪಕ್ ಶೆಟ್ಟಿ ಕೊರೊನಾ ಕಾರಣದಿಂದಾಗಿ ತಮ್ಮ ವಿವಾಹವನ್ನು ಮುಂದೂಡಿದ್ದಾರೆ.
ಮಂಗಳೂರು ಮೂಲದವರಾದ ದೀಪಕ್ ಶೆಟ್ಟಿ ಅವರ ವಿವಾಹ ಮೇ 17ಕ್ಕೆ ಮಂಗಳೂರಿನಲ್ಲಿ ನಡೆಯಲಿತ್ತು. ಆದರೆ ಕೊರೊನಾ ಕಾರಣದಿಂದಾಗಿ ವಿವಾಹವನ್ನು ಮುಂದೂಡಲಾಗಿದ್ದು ಅಕ್ಟೋಬರ್18 ರಂದು ಅವರ ಹುಟ್ಟು ಹಬ್ಬದ ದಿನದಂದೆ ವಿವಾಹವಾಗಲೆಂದು ನಿರ್ಧರಿಸಿದ್ದಾರೆ.
ಫೇಸ್‌ಬುಕ್ ಮೂಲಕ ಮಂಗಳೂರು ಫ್ಯಾಷನ್ ವೀಕ್‍ನ ಮಾಲಕಿ ಇವೆಂಟ್ ಆರ್ಗನೈಸರ್ ಸೋನಿಯಾ ರಾಡ್ರಿಗಸ್ ಅವರ ಪರಿಚಯ ದೀಪಕ್ ಅವರಿಗೆ ಆಗಿದ್ದು ಸ್ನೇಹ ಪ್ರೀತಿಯಾಗಿ ಈಗ ವಿವಾಹವಾಗಲು ತೀರ್ಮಾನಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ದೀಪಕ್ ಶೆಟ್ಟಿ, ನಾನು ಹಾಗೂ ಮಂಗಳೂರಿನಲ್ಲಿ ಇವೆಂಟ್ ಆರ್ಗನೈಸರ್ ಆಗಿರುವ ಸೋನಿಯಾ ರಾಡ್ರಿಗಸ್ ಪ್ರೀತಿಸುತ್ತಿದ್ದು ಮೇ 10ರಂದು ನಿಶ್ಚಿತಾರ್ಥ ಮಾಡಿಕೊಂಡು, 17ಕ್ಕೆ ಮಂಗಳೂರಿನಲ್ಲಿ ಮದುವೆಯಾಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆವು. ಆದರೆ ಕೊರೊನಾ ಕಾರಣದಿಂದ ಎಲ್ಲವೂ ಕ್ಯಾನ್ಸಲ್ ಆಗಿದೆ. ಅಕ್ಟೋಬರ್ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬವಿದೆ. ಅಂದು ಮದುವೆ ಆಗಲಿದ್ದೇನೆ ಎಂದು ಹೇಳಿದ್ದಾರೆ.
ಪಂಚತಂತ್ರ, ಗಡಿಯಾರ, ಭರ್ಜರಿ, ಕೋಟಿಗೊಬ್ಬ 3 ಸೇರಿದಂತೆ 30ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಮಿಂಚಿರುವ ಈ ನಟ ಕನ್ನಡ ಮಾತ್ರವಲ್ಲದೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
Follow us on Social media