Breaking News

ವಿದೇಶಿ ಲೀಗ್ ಗಳಲ್ಲಿ ಆಡಲು ಬಿಸಿಸಿಐ ಅವಕಾಶ ನೀಡಬೇಕು: ಹರ್ಭಜನ್ ಸಿಂಗ್

ನವದೆಹಲಿ: ವಿದೇಶಿ ಲೀಗ್ ಗಳಲ್ಲಿ ಆಡಲು ಭಾರತೀಯ ಕ್ರಿಕೆಟಿಗರಿಗೆ ಅವಕಾಶ ನೀಡುವಂತೆ ಭಾರತದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. 

ಇದೇ ವೇಳೆ ಅನುಮತಿಗಾಗಿ ಯಾವ ಆಟಗಾರರು ಅರ್ಜಿ ಸಲ್ಲಿಸಬಹುದು ಎಂಬುದಕ್ಕೆ ಒಂದು ವ್ಯವಸ್ಥೆ ಅಥವಾ ಮಾನದಂಡೆ ರೂಪಿಸುವಂತೆಯೂ ಅವರು ಮಂಡಳಿಗೆ ಒತ್ತಾಯಿಸಿದ್ದಾರೆ.

ಭಾನುವಾರ ಮಾಜಿ ಕ್ರಿಕೆಟಿಗ ಆಕಾಶ್ ಚೋಫ್ರಾ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಭಾರತ ತಂಡದ ಆಯ್ಕೆಗೆ ಪರಿಗಣಿಸಲ್ಪಡದ ಅಥವಾ ರಾಷ್ಟ್ರೀಯ ಗುತ್ತಿಗೆ ಹೊಂದಿರದ ಆಟಗಾರರಿಗೆ ವಿದೇಶಿ ಲೀಗ್ ಗಳಲ್ಲಿ ಆಡಲು ಬಿಸಿಸಿಐ ಅವಕಾಶ ಮಾಡಿಕೊಡಬೇಕು. 50 ಟೆಸ್ಟ್ ಆಡಿದವರು ಅಥವಾ 35 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಮಂಡಳಿ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

Follow us on Social media

About the author

×