Breaking News

ವಾರ್ತಾ ಇಲಾಖೆಯಿಂದ ಡಾ: ರಾಜ್‍ಕುಮಾರ್ ಜಯಂತಿ ಸರಳ ಆಚರಣೆ

ಬೆಂಗಳೂರು : ಡಾ. ರಾಜಕುಮಾರ್ ಅವರು ಕನ್ನಡದ ಸಾಂಸ್ಕಂತಿಕ ಪ್ರತಿನಿಧಿ, ಈ ಕೋವಿಡ್ ಲಾಕ್‍ಡೌನ್ ಸಮಯದಲ್ಲೂ ಸಹ ಅವರ ಜಯಂತಿಯ ನೆನಪು ಜನ-ಮನಗಳಲ್ಲಿ ಚೈತನ್ಯ ತುಂಬುವಂತೆ ಮಾಡಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಹೇಳಿದ್ದಾರೆ.
ಕೋವಿಡ್ -19 ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ವರನಟ ಡಾ: ರಾಜ್‍ಕುಮಾರ್ ಅವರ 92 ನೇ ಜಯಂತಿಯ ಸರಳ ಕಾರ್ಯಕ್ರಮದಲ್ಲಿ ಡಾ.ರಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಒಂದೇ ತೆರನಾಗಿ ಕಾಣುವ ವ್ಯಕ್ತಿತ್ವ ಡಾ: ರಾಜ್‍ಕುಮಾರ್ ಅವರದ್ದು ಎಂದು ಅವರ ಒಡನಾಟವನ್ನು ಸ್ಮರಿಸಿಕೊಂಡರು.
ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವ ಏಕೈಕ ಕಲಾವಿದ ಎಂದರೆ ಅದು ರಾಜ್‍ಕುಮಾರ್ ಮಾತ್ರ, ಅವರ ಪ್ರತಿ ನಡೆ-ನುಡಿ ಇತರರಿಗೆ ಮಾರ್ಗದರ್ಶನವಾಗಿತ್ತು. ಅವರು ಕೇವಲ ಒಬ್ಬ ಕಲಾವಿದರಲ್ಲದೆ ಅತ್ಯುತ್ತಮ ಮಾನವೀಯ ಅಂತಃಕರಣವುಳ್ಳ ಮಹಾನ್ ಮಾನವತಾವಾದಿಯಾಗಿದ್ದರು ಎಂದು ಹೇಳಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×