ಮಂಗಳೂರು : ಕೊರೊನಾ ಸೋಂಕು ಭೀತಿಯಿಂದ ದೇಶವೇ ಲಾಕ್ ಡೌನ್ ಆದ ಸಂದರ್ಭದಲ್ಲಿ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಹಾರಾಟ ರದ್ದುಗೊಳಿಸಲಾಗಿತ್ತು. ಇದೀಗ ವಿದೇಶದಲ್ಲಿ ಸಿಲುಕಿಕೊಂಡ ನಮ್ಮವರನ್ನು ಕರೆ ತರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಮತ್ತೆ ಆರಂಭಗೊಳ್ಳಲಿದೆ. ಮೇ 12ರಂದು ದುಬೈನಿಂದ ಮಂಗಳೂರಿಗೆ ಮೊದಲ ವಿಮಾನ ಆಗಮಿಸಲಿದೆ.
ದುಬೈನಲ್ಲಿ ಸಿಲುಕಿಕೊಂಡಿರುವ ಮಂಗಳೂರಿಗರನ್ನು ಮತ್ತೆ ಊರಿಗೆ ಕರೆತರುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ಕಾರ್ಯಪ್ರವೃತವಾಗಿದೆ. ಅದರಂತೆ ಮೇ 12ರಂದು ಮೊದಲ ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಲಿದೆ. ಮೊದಲ ವಿಮಾನದಲ್ಲಿ ಸುಮಾರು 180 ಮಂದಿ ಪ್ರಯಾಣಿಕರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತವರು ಸೇರಲಿದ್ದಾರೆ.
ಭಾರತಕ್ಕೆ ಕರೆ ತರುವ ಸಂದರ್ಭದಲ್ಲಿ ಏನೇನು ಪ್ರಕ್ರಿಯೆಗಳಿವೆ?
ಸಂಕಷ್ಟದಲ್ಲಿರುವ ನಮ್ಮವರನ್ನು ಅವರು ಇರುವ ರಾಷ್ಟ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ
ಕೊರೊನಾ ನೆಗೆಟಿವ್ ಬಂದವರಿಗೆ ಮೊದಲ ಆದ್ಯತೆ
ಭಾರತಕ್ಕೆ ಬಂದು ವಿಮಾನ ಲ್ಯಾಂಡ್ ಆದ ತಕ್ಷಣ ಮತ್ತೊಮ್ಮೆ ಅವರಿಗೆ ಪರೀಕ್ಷೆ
14 ದಿನಗಳ ಕಾಲ ಸರಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಕ್ವಾರಂಟೈನ್
ನೆಗೆಟಿವ್ ಬಂದಲ್ಲಿ ಬಳಿಕ 14 ದಿನಗಳ ಕಾಲ ಹೋಂ ಕ್ವಾರಂಟೈನ್
ಗರ್ಭಿಣಿಯರಿಗೆ 7 ದಿನಗಳ ಕಾಲ ಸರಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಕ್ವಾರಂಟೈನ್
ನೆಗೆಟಿವ್ ವರದಿ ಬಂದ ತಕ್ಷಣ ಹೋಂ ಕ್ವಾರಂಟೈನ್ ಗೆ ಅವಕಾಶ
ಮೇ 14ರಂದು ಎರಡನೇ ಲೀಸ್ಟ್ ಬಿಡುಗಡೆ
ಸೌದಿ, ಕತಾರ್ ನಲ್ಲಿರುವವರಿಗೆ ಅವಕಾಶ
ಊರಿಗೆ ಬರುವವರಿಗೆ ಹೋಟೆಲ್, ಹಾಸ್ಪಿಟಲ್, ಹಾಸ್ಟೆಲ್ ಕ್ವಾರಂಟೈನ್