ಲಕ್ನೋ : ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅವರು ಕಳೆದ ಮೂರು ವರ್ಷಗಳಿಂದ ಉತ್ತರಪ್ರದೇಶ ಬಿಜೆಪಿ ಸರ್ಕಾರವು ರೈತರ ಸಾಲ ಮನ್ನಾ ಮಾಡುವ ನಾಟಕವಾಡುತ್ತಿದೆ ಎಂದು ಹೇಳಿದರು.
ಸಹರಾನ್ಪುರದಲ್ಲಿ ಸಾಲದಲ್ಲಿದ್ದ ರೈತನ ಆತ್ಮಹತ್ಯೆಯ ಕುರಿತು ಮಾತನಾಡಿದ ಪ್ರಿಯಾಂಕಾ, ಬ್ಯಾಂಕ್ ನವರ ಸಾಲ ವಸೂಲಾತಿಯ ಕಾಟದಿಂದ ರಾಜ್ಯದ ಎಲ್ಲೆಡೆ ಸಣ್ಣ ಸಾಲ ಪಡೆದ ರೈತರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಸಹರಾನ್ಪುರದ ರೈತ ವೇದ್ ಪಾಲ್ ಅವರ ಮೇಲೆ 1.4 ಲಕ್ಷ ರೂ. ಸಾಲಕ್ಕಾಗಿ ಬ್ಯಾಂಕುಗಳು ಅವನನ್ನು ತುಂಬಾ ಕಾಡುತ್ತಿದ್ದವು, ಅದರಿಂದ ನೊಂದ ರೈತ ಬ್ಯಾಂಕಿನ ಮುಂದೆ ಆತ್ಮಹತ್ಯೆ ಮಾಡಿಕೊಂಡನು.
ಈ ರೈತ ಕುಟುಂಬಕ್ಕೆ ಸರ್ಕಾರದ ಉತ್ತರವೇನು ಎಂದು ಅವರು ತಮ್ಮ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
Source : UNI
Follow us on Social media