ಬೆಂಗಳೂರು: ಖ್ಯಾತ ಬರಹಗಾರ್ತಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಇನ್ ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಬ್ರಾಹ್ಮಣ ಸಂಘ ಮತ್ತು ಅಕ್ಷಯಪಾತ್ರೆ ಹೆಸರಿನಡಿ ಅಗತ್ಯವಿರುವ ಬಡ ಕುಟುಂಬಗಳಿಗೆ ವಿತರಿಸಬೇಕಿದ್ದ ಆಹಾರ ಧಾನ್ಯ ಪ್ಯಾಕೆಟ್ ಗಳಿಗೆ ತಮ್ಮ ಹೆಸರು ಹಾಕಿಕೊಂಡು ಪುಕ್ಕಟೆ ಪ್ರಚಾರ ಪಡೆದಿರುವ ಗಂಭೀರ ಆರೋಪ ರಾಯಚೂರು ಜಿಲ್ಲೆಯಿಂದ ಕೇಳಿ ಬಂದಿದೆ.
ರಾಜ್ಯಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಆಹಾರ ಧಾನ್ಯ ವಿತರಿಸಲು ರಾಯಚೂರು ಜಿಲ್ಲೆಗೆ ಈ ಮೇಲ್ಕಂಡ ಹೆಸರಿನಡಿ ಆಹಾರ ಪ್ಯಾಕೇಟ್ ಗಳನ್ನು ರವಾನಿಸಲಾಗಿತ್ತು. ಇದಕ್ಕೆ ಲೇಬಲ್ ಗಳನ್ನು ಸಹ ಅಂಟಿಸಲಾಗಿತ್ತು.
ಆದರೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿ ಪ್ರಮುಖರೂ ಆದ ತ್ರಿವಿಕ್ರಮ ಜೋಷಿ ಎಂಬುವರು ತಮ್ಮ ಹೆಸರಿನ ಜನ ಸೇವಾ ಪ್ರತಿಷ್ಠಾನದ ಹೆಸರಿರುವ ಲೇಬಲ್ ಮೆತ್ತಿ ಆಹಾರಧಾನ್ಯಗಳ ಪೊಟ್ಟಗಳನ್ನು ವಿತರಣೆ ಮಾಡಿದ್ದಾರೆ.
Follow us on Social media