Breaking News

ರಾತ್ರಿ ಕರ್ಫ್ಯೂ ಉಲ್ಲಂಘಿಸಿ ಬರ್ತ್‌ಡೇ ಪಾರ್ಟಿ ನಡೆಸಿದ ಸಚಿವ ಆರ್.ಅಶೋಕ್

ಚಿಕ್ಕಮಗಳೂರು : ಕರ್ನಾಟಕ ಕಂದಾಯ ಸಚಿವ ಆರ್.ಅಶೋಕ್ ಜುಲೈ 1 ರ ಬುಧವಾರ ತಮ್ಮ ಜನ್ಮದಿನದ ಆಚರಣೆಗೆ ರಾತ್ರಿ ಪಾರ್ಟಿ ಮಾಡುವ ಮೂಲಕ ತಮ್ಮದೇ ಸರ್ಕಾರ ವಿಧಿಸಿದ ರಾತ್ರಿ ಕರ್ಫ್ಯೂ ಉಲ್ಲಂಘಿಸಿದ್ದಾರೆ.

ನಗರದ ಕೈಮರ ಬಳಿ ಇರುವ ಖಾಸಗಿ ಹೋಟೆಲಿನಲ್ಲಿ ರಾತ್ರಿಯಲ್ಲಿ ತಮ್ಮ ಬರ್ತ್‌ಡೇ ಪಾರ್ಟಿಯನ್ನು ಸಚಿವ ಆರ್.ಅಶೋಕ್ ಆಯೋಜಿಸಿದ್ದು ಈ ಪಾರ್ಟಿಯಲ್ಲಿ ಜಗದೀಶ್ ಶೆಟ್ಟರ್, ಸಿ ಟಿ ರವಿ, ಸತೀಶ್ ರೆಡ್ಡಿ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಈ ಹಿಂದೆ ರಾತ್ರಿ ಪಾರ್ಟಿ ನಡೆಸುವುದರಿಂದ ಸೋಂಕು ಅಧಿಕವಾಗುತ್ತದೆ ಎಂದು ಸಚಿವರು ಹೇಳಿದ್ದು ಇದೀಗ ಅವರೇ ರಾತ್ರಿಯಲ್ಲಿ ಪಾರ್ಟಿ ನಡೆಸಿದ ಕಾರಣ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×