ಬೆಂಗಳೂರು: ರಾಜ್ಯದಲ್ಲಿ ಇಂದು 11 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಒಟ್ಟಾರೇ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆ ಆಗಿದೆ. ಈ ಪೈಕಿ 22 ಮಂದಿ ಮೃತಪಟ್ಟಿದ್ದು, 235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಮಾಹಿತಿ ನೀಡಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 8, ಬೆಳಗಾವಿ ಜಿಲ್ಲೆಯಲ್ಲಿ 3 ಪ್ರಕರಣಗಳು ಇಂದು ಹೊಸದಾಗಿ ಪತ್ತೆಯಾಗಿವೆ. ಮಂಡ್ಯದ 25 ವರ್ಷದ ಯುವಕ 566ನೇ ಸೋಂಕಿತನಾಗಿದ್ದು, ಮುಂಬೈ, ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆಯಿದೆ. ಮಂಡ್ಯದ 24 ವರ್ಷದ ಯುವತಿ 567ನೇ ರೋಗಿಯಾಗಿದ್ದು, ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆಯಿದೆ. 568 ರೋಗಿ ಕೂಡಾ ಮಂಡ್ಯದ 27 ವರ್ಷದ ಯುವಕನಾಗಿದ್ದು, ಮಂಬೈ, ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆಯಿದೆ.
569ನೇ ರೋಗಿ ಮಂಡ್ಯ ಜಿಲ್ಲೆ ಕೆ. ಆರ್. ಪೇಟೆಯ 30 ವರ್ಷದ ಮಹಿಳೆಯಾಗಿದ್ದಾರೆ. ಇವರು ರೋಗಿಗಳಾದ 566, 567 ಮತ್ತು 568ರೊಂದಿಗೆ ಸಂಪರ್ಕ ಹೊಂದಿರುತ್ತಾರೆ. 570, 571, 572 ಹಾಗೂ 573ನೇ ರೋಗಿಗಳು ಮಂಡ್ಯ ಜಿಲ್ಲೆ ಮಳವಳ್ಳಿವರಾಗಿದ್ದು, ಇವರೆಲ್ಲರೂ 179ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದವರಾಗಿದ್ದಾರೆ.
574, 575 ಮತ್ತು 576ನೇ ರೋಗಿಗಳು ಬೆಳಗಾವಿ ಜಿಲ್ಲೆ ರಾಯಭಾಗದವರಾಗಿದ್ದು, 301ನೇ ರೋಗಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದಾರೆ. ಇವರೆಲ್ಲರಿಗೂ ಜಿಲ್ಲಾ ಕೇಂದ್ರದ ನಿಗಧಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
Follow us on Social media