ಚೆನ್ನೈ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿಯೊಬ್ಬಳು ಟ್ರಕ್ ಅಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಚೆನ್ನೈನಲ್ಲಿ ಸಂಭವಿಸಿದೆ.
ಶೋಭನಾ ( 22) ಮೃತ ಯುವತಿಯಾಗಿದ್ದಾಳೆ. ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶೋಭನಾ ಮುಂಜಾನೆ ತನ್ನ ಸಹೋದರನನ್ನು ದ್ವಿಚಕ್ರ ವಾಹನದಲ್ಲಿ ಕೋಚಿಂಗ್ ಕ್ಲಾಸ್ಗೆ ಕರೆದುಕೊಂಡು ಹೋಗುತ್ತಿದ ವೇಳೆ ಮಧುರವಾಯಲ್ ರಸ್ತೆಯಲ್ಲಿರುವ ಹೊಂಡಗಳನ್ನು ತಪ್ಪಿಸಲು ಹೋಗುವಾಗ ವಾಹನದ ನಿಯಂತ್ರಣ ತಪ್ಪಿ, ಸ್ಕಿಡ್ ಆಗಿ ಕೆಳಕ್ಕೆ ಬಿದ್ದಿದ್ದಾರೆ.
ಕೆಳಕ್ಕೆ ಬಿದ್ದ ಶೋಭನಾ ಅವರ ಮೇಲೆ ವೇಗವಾಗಿ ಬಂದ ಟ್ರಕ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಶೋಭನಾ ಅವರ ಸಹೋದರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮರಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಶೋಭನಾ ಅವರ ಹರಿದ ಬಳಿಕ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಆ ಬಳಿಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಲಾರಿ ಚಾಲಕ ಮೋಹನ್ ಅವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.
Follow us on Social media