ಬೆಳ್ತಂಗಡಿ: ದೈಹಿಕ ಹಾಗೂ ಮಾನಸಿಕ ಆರೋಗ್ಯದೊಂದಿಗೆ ದೀರ್ಘಕಾಲ ಸಂತಸದಾಯಕ ಜೀವನ ನಡೆಸಲು ಯೋಗಾಭ್ಯಾಸ ಅಗತ್ಯ.
ಪ್ರತಿನಿತ್ಯವೂ ಕುಟುಂಬದ ಸದಸ್ಯರೆಲ್ಲರೂ ಯೋಗಾಭ್ಯಾಸ ಮಾಡಿ ಉತ್ತಮ ಪೌಷ್ಟಿಕ ಆಹಾರ ಸೇವನೆಯೊಂದಿಗೆ ಆರೋಗ್ಯಭಾಗ್ಯವನ್ನು ಹೊಂದಬೇಕು. ಯೋಗಾಭ್ಯಾಸ ಯೋಗ ದಿನಾಚರಣೆಗೆ ಸೀಮಿತವಾಗದೆ ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದ್ದಾರೆ.
ಭಾನುವಾರ ಆರನೇ ವಿಶ್ವ ಯೋಗ ದಿನಾಚರಣೆ ಸಂದರ್ಭ ಅವರು ನೀಡಿದ ಸಂದೇಶದಲ್ಲಿ ಭಾರತದ ಆಧ್ಯಾತ್ಮಿಕತೆ ಮತ್ತು ಯೋಗಾಭ್ಯಾಸ ಸಾಂಪ್ರದಾಯಕವಾಗಿದೆ ಎಂದು ಕಡೆಗಣಿಸಿದ್ದರೂ ಆರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕ್ಕೆ ಯೋಗದ ಮಹತ್ವ ಪರಿಚಯಿಸಿದ ಬಳಿಕ ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರಕಿದೆ. ಇಂದಿನ ಸಂಕ್ರಮಣ ಕಾಲದಲ್ಲಿ ದೇಹ ಮತ್ತು ಮನಸ್ಸನ್ನು ಬಾಧಿಸುವ ಎಲ್ಲಾ ರೀತಿಯ ಕೆಟ್ಟ ವೈರಸ್ ಗಳ ನಿಗ್ರಹಕ್ಕೆ ಎಲ್ಲರೂ ಯೋಗಾಭ್ಯಾಸ ನಿತ್ಯವೂ ಮಾಡಬೇಕು ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
Follow us on Social media