ಬೆಂಗಳೂರು : ”ಮುಳುಗುವ ಹಡಗಿಗೆ ಡಿ.ಕೆ.ಶಿವಕುಮಾರ್ ನಾಯಕರಾಗಿದ್ದಾರೆ” ಎಂದು ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ”ಡಿಕೆಶಿ ಆರಂಭದಲ್ಲಿ ಶೌರ್ಯ ಪ್ರದರ್ಶಿಸಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದವರೇ ಡಿಕೆಶಿಯವರನ್ನು ಕಾಂಗ್ರೆಸ್ ಮುಕ್ತರನ್ನಾಗಿಸುತ್ತಾರೆ” ಎಂದು ಹೇಳಿದ್ದಾರೆ
”ನಮ್ಮದು ಕಾರ್ಯಕರ್ತರನ್ನು ಆಧರಿಸಿ ಇರುವಂತಹ ಪಕ್ಷ. ಹಾಗಾಗಿ ರಾಜ್ಯದಲ್ಲಿ ಬಿಜೆಪಿ ಮುಕ್ತವಾಗಲು ಸಾಧ್ಯವಿಲ್ಲ. ಬದಲಾಗಿ ನಾವೇ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ” ಎಂದು ಹೇಳಿದ ಅವರು ”ಪ್ರಧಾನಿ ಹೇಳಿದಂತೆ ನಾವು ದೇಶ ಮೊದಲು ಬಳಿಕ ಎಲ್ಲ ಎಂಬುದರ ಪಾಲನೆ ಮಾಡುತ್ತೇವೆ” ಎಂದಿದ್ದಾರೆ.
Follow us on Social media