ಬೆಳ್ತಂಗಡಿ : ತಾಲೂಕಿನಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಶಾಲೆಯಲ್ಲಿ ಮುಂಬೈನಿಂದ ಆಗಮಿಸಿದ ಒಂದೇ ಕುಟುಂಬದ 10 ಜನರಿದ್ದ ಪೈಕಿ ಒಂದೇ ಕುಟುಂಬದ 45 ವರ್ಷದ ಮಹಿಳೆ ಮತ್ತು 43 ವರ್ಷದ ವ್ಯಕ್ತಿಗೆ ಕೊರೊನ ಪಾಸಿಟಿವ್ ಕಂಡುಬಂದಿದೆ.
ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಮೇ 24ರಂದು ಮುಂಬೈಯಿಂದ ಬಂದ 6 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇವರಿಗೆ ಕ್ವಾರೆಂಟೈನ್ ಇಂದು ಕೊನೆಗೊಳ್ಳುತ್ತಿದ್ದು ಇವರ ಪೈಕಿ ಇಬ್ಬರಿಗೆ ಪಾಸಿಟಿವ್ ಬಂದಿದೆ.
ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಮುಂಬೈನಿಂದ ಆಗಮಿಸಿದ 6 ಜನರಲ್ಲಿ 28 ವರ್ಷ ಮತ್ತು 42 ವರ್ಷದ ಇಬ್ಬರು ವ್ಯಕ್ತಿಗಳ ವರದಿ ಪಾಸಿಟಿವ್ ಆಗಿದೆ.
ಸದ್ಯ ಪಾಸಿಟಿವ್ ವರದಿ ಬಂದಿರುವ ಎಲ್ಲರನ್ನೂ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Follow us on Social media