ಶಾರ್ಜಾ: ಮಹಿಳೆಯರ ಮಿನಿ ಐಪಿಎಲ್ ಟೂರ್ನಿಯಲ್ಲಿ ನಾಯಕಿ ಸ್ಮೃತಿ ಮಂದನಾ ನೇತೃತ್ವದ ಟ್ರೈಲ್ ಬ್ಲೇಜರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಸೂಪರ್ ನೋವಾಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟ್ರೈಲ್ ಬ್ರೇಜರ್ಸ್ ತಂಡ 16 ರನ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟ್ರೈಲ್ ಬ್ಲೇಜರ್ಸ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 118 ರನ್ ಪೇರಿಸಿತ್ತು. 119 ರನ್ ಗಳ ಗುರಿ ಬೆನ್ನಟ್ಟಿದ ಸೂಪರ್ ನೋವಾಸ್ 7 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಲಷ್ಟೇ ಶಕ್ತವಾಯಿತು.
ಟ್ರೈಲ್ ಬ್ರೇಜರ್ಸ್ ತಂಡದ ಪರ ಡೊಟಿನ್ 20, ಸ್ಮೃತಿ ಮಂದಾನ 68, ಘೋಶ್ 10 ರನ್ ಬಾರಿಸಿದ್ದಾರೆ.
ಸೂಪರ್ ನೋವಾಸ್ ಪರ ರೋಡ್ರಿಗಸ್ 13, ಭಾಟಿಯಾ 14, ಹರ್ಮನ್ ಪ್ರೀತ್ ಕೌರ್ 30, ಸಿರಿವರ್ದನೆ 19 ರನ್ ಸಿಡಿಸಿದ್ದಾರೆ.
Follow us on Social media