ಮಂಡ್ಯ: ಬಟ್ಟೆ ಒಗೆಯಲು ಹೋಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿಗೆ ಸಮೀಪದ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿಯಲ್ಲಿ ನಡದಿದೆ.
ಮೃತ ಪಟ್ಟವರನ್ನು ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38) ಮತ್ತು ಮಕ್ಕಳಾದ ಸವಿತ(19), ಸೌಮ್ಯ(14) ಎಂದು ಗುರುತಿಸಲಾಗಿದೆ.
ಗ್ರಾಮದ ಹತ್ತಿರವಿರುವ ಕೆರೆಗೆ ಇಂದು ಮಕ್ಕಳೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ ಒಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾರೆ. ಅವರನ್ನು ಎಳೆದುಕೊಳ್ಳುಲು ಹೋಗಿ ಇತರರು ನೀರುಪಾಲಾಗಿರಬಹುದು ಎಂದು ಶಂಕಿಸಲಾಗಿದೆ.
ಗ್ರಾಮಸ್ಥರು ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದುದನ್ನು ಗಮನಿಸಿ ಹತ್ತಿರ ಹೋಗಿ ನೋಡಲಾಗಿ ತಡದಲ್ಲಿ ಬಟ್ಟೆಗಳು ಬಿದ್ದಿರುವುದು ಕಂಡಿದ್ದಾರೆ. ನಂತರದಲ್ಲಿ ಗ್ರಾಮಸ್ಥರು ಮುಳುಗು ತಜ್ಞರನ್ನು ಕರೆಸಿ ಕೆರೆಯಲ್ಲಿ ಮುಳುಗಿದ್ದ ಶವ ಪತ್ತೆ ಹಚ್ಚಿ ಹೊರಕ್ಕೆ ತೆಗೆದಿದ್ದಾರೆ. ಸ್ಥಳದಲ್ಲಿ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ
Follow us on Social media