ಹಳೆಯಂಗಡಿ : ಟೆಂಪೋವೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ 66ರ ಮುಖ್ಯ ಜಂಕ್ಷನ್ನಲ್ಲಿ ನಡೆದಿದೆ.
ಗಾಯಾಳುವನ್ನು ಸ್ಥಳೀಯ ನಿವಾಸಿ ಬಾಲಕೃಷ್ಣ ಎಂದು ಗುರುತಿಸಲಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯಂಗಡಿ ಒಳ ರಸ್ತೆಗೆ ಜಂಕ್ಷನ್ ಮೂಲಕ ತೆರಳುತ್ತಿದ್ದಾಗ ಮಂಗಳೂರು ಕಡೆಯಿಂದ ಅತಿ ವೇಗದಲ್ಲಿ ಬಂದ ಟೆಂಪೋ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬಾಲಕೃಷ್ಣ ಅವರ ಸ್ಕೂಟರ್ ಟೆಂಪೋದ ಅಡಿಗೆ ಹೋಗಿದ್ದು, ಅವರ ಕಾಲಿಗೆ ಗಂಭೀರ ಏಟು ಬಿದ್ದಿದೆ. ಬಳಿಕ ಸ್ಥಳೀಯರು ಆಗಮಿಸಿ ಟೆಂಪೋ ಅಡಿಯಲ್ಲಿದ್ದ ಸ್ಕೂಟರ್ನ್ನು ಹೊರ ತೆಗೆದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು.ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow us on Social media