ಮಂಗಳೂರು : ವಿದೇಶದಲ್ಲಿ ಮಂಕಿ ಪಾಕ್ಸ್ ಕಾಯಿಲೆ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಿಗಾ ವಹಿಸಲು ಸೂಚಿಸಲಾಗಿದೆ. ಇದಕ್ಕಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಎರಡು ಬೆಡ್ ಗಳ ಐಸೊಲೇಶನ್ ವಾರ್ಡ್ ಸಿದ್ದಗೊಳಿಸಲಾಗಿದೆ.
ರಾಜ್ಯ ಸರ್ಕಾರ ಸೂಚನೆಯಂತೆ ರೋಗ ಲಕ್ಷಣವಿದ್ದವರು ಪತ್ತೆಯಾದರೆ ಐಸೋಲೇಶನ್ ಮಾಡಲು ಐಸೊಲೇಶನ್ ವಾರ್ಡ್ ಸಿದ್ದಗೊಳಿಸಲಾಗಿದೆ. ಅಲ್ಲದೆ ಕಳೆದ 21 ದಿನಗಳಲ್ಲಿ , ಅಮೇರಿಕಾ, ಇಂಗ್ಲೆಂಡ್ , ಬ್ರಝಿಲ್ , ಮೊದಲಾದ ದೇಶಗಳಿಂದ ಬಂದವರ ಮಾಹಿತಿ ನೀಡುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಅಲ್ಲದೆ ವಿದೇಶಗಳಿಂದ ಆಗಮಿಸುವವರಲ್ಲಿ ರೋಗ ಲಕ್ಷಣಗಳು ಪತ್ತೆಯಾದರೆ ಮಾಹಿತಿ ನೀಡುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇಲಾಖೆ ಅಧಿಕಾರಿ , ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.ಇದುವರೆಗೆ ದೇಶದಲ್ಲಿ ಮಂಕಿಪಾಕ್ಸ್ ಪತ್ತೆಯಾಗಿಲ್ಲ. ಮುಖ ಹಾಗೂ ಮೈಮೇಲೆ ನೀರು ತುಂಬಿದ ಗುಳ್ಳೆಗಳಿರುವುದು ಮಂಕಿಫಾಕ್ಸ್ ನ ಮುಖ್ಯ ಲಕ್ಷಣ ಎಂದು ಅವರು ತಿಳಿಸಿದ್ದಾರೆ.
Follow us on Social media