ಮಂಗಳೂರು : ರಸ್ತೆ, ಒಳಚರಂಡಿಯಂತಹ ಸಮಸ್ಯೆಗಳನ್ನು ಮಾತನಾಡುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಲವ್ ಜಿಹಾದ್‌ನಿಂದ ರಕ್ಷಿಸಿ ಎಂದು ನಳಿನ್ ಕುಮಾರ್ ಕಟೀಲು ಕರೆ ನೀಡಿದ್ದಾರೆ.
- ಈ ಕುರಿತು ಮಾತನಾಡಿರುವ ಅವರು, ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಾರ್ಟಿ ಬೇಕು. ಲವ್ ಜಿಹಾದ್ ವಿರುದ್ದ ಕಾನೂನನ್ನ ಬಿಜೆಪಿ ಸರ್ಕಾರ ತರುತ್ತೆ ಎಂದಿದ್ದಾರೆ.ಇನ್ನು ಲವ್ ಜಿಹಾದ್ ಇತ್ತೀಚೆಗೆ ಕಾಡುತ್ತಿರುವ ಬಹಳ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ನಿಮ್ಮ ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಿ. ಅದಕ್ಕೆ ಬಿಜೆಪಿಗೆ ಗೆಲ್ಲಿಸಿ ಅಧಿಕಾರ ನೀಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಯುವಕ-ಯುವತಿಯರ ರಕ್ಷಣೆಗೆ ಬದ್ಧವಾಗಿದೆ ಎಂದರು.ಲವ್ ಜಿಹಾದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ, ಅಭಿವೃದ್ಧಿಯ ಕುರಿತಾಗಿ ಮಾತನಾಡುವುದನ್ನು ಬಿಟ್ಟು ಜನರಲ್ಲಿ ಲವ್ ಜೀಹಾದ್ ಬಗ್ಗೆ ಮಾತನಾಡುವುದು ಸರಿಯೇ ಎಂದು ಪಶ್ನಿಸಿದ್ದಾರೆ.