ಮಂಗಳೂರು: ಅರೆಬರೆ ರಸ್ತೆ ಕಾಮಗಾರಿಯ ಪರಿಣಾಮ ತ್ಯಾಜ್ಯ ಸಾಗಾಟದ ಲಾರಿಯೊಂದು ರಸ್ತೆಯಲ್ಲಿ ಹೂತು ಹೋದ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿಕಂಬಳ ರಸ್ತೆಯಲ್ಲಿ ನಡೆದಿದೆ.
ಮಹಾನಗರ ಪಾಲಿಕೆಯ ತ್ಯಾಜ್ಯ ಸಾಗಿಸುವ ಆ್ಯಂಟೋನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಲಾರಿಯು ಬಂಟ್ಸ್ ಹಾಸ್ಟೆಲ್- ಕಂದ್ರಿಕಂಬಳ ರಸ್ತೆಯಲ್ಲಿ ರಸ್ತೆ ಬದಿ ನಿಲ್ಲಿಸಿದ ಸಂದರ್ಭದಲ್ಲಿ ಹಿಂಭಾಗದ ಎಡ ಬದಿಯ ಟೈರ್ ಮಣ್ಣಿನಲ್ಲಿ ಹೂತು ಹೋಗಿ ಸಿಲುಕಿಕೊಂಡಿದೆ.
ರಸ್ತೆಯ ಎರಡೂ ಬದಿ ಕೆಲವೊಂದು ಕಡೆ ಇಂಟರ್ ಲಾಕ್ ಅಳವಡಿಸಿದರೆ ಕೆಲವೊಂದು ಕಡೆ ಇಂಟರ್ಲಾಕ್ ಅಳವಡಿಸದೆ ಹಾಗೆಯೇ ಬಿಡಲಾಗಿದೆ.
ರಸ್ತೆಯಲ್ಲಿ ಮಳೆ ನೀರು ತುಂಬಿದಾಗ ಎಲ್ಲಿ ಇಂಟರ್ಲಾಕ್ ಹಾಕಿದ್ದಾರೆ, ಎಲ್ಲಿ ಹಾಕಿಲ್ಲ ಮತ್ತು ಎಲ್ಲಿ ಹೊಂಡ ಇದೆ ಎನ್ನುವುದು ಗೋಚರಿಸದೆ ಇರುವುದರಿಂದ ಈ ಘಟನೆ ಸಂಭವಿಸಿದೆ.ಇಂತಹ ಅರ್ಧಂಬರ್ಧ ಕಾಮಗಾರಿಯ ಹಲವಾರು ತಾಣಗಳು ಮಂಗಳೂರಿನ ರಸ್ತೆಗಳಗಳಲ್ಲಿ ಇವೆ. ಮಳೆ ನೀರು ತುಂಬಿದಾಗ ಹೊಂಡ ಗೋಚರಿಸದೆ ಇರುವುದರಿಂದ ಇಂತಹ ಘಟನೆ ನಗರದಲ್ಲಿ ಸರ್ವೇ ಸಾಮಾನ್ಯವಾಗಿದೆ.
Follow us on Social media