ಮಂಗಳೂರು : ಪಂಪ್‌ವೆಲ್ ಮೇಲ್ಸೇತುವೆ ಮೇಲೆ ಕಾರೊಂದು ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕೇರಳ ಕಡೆ ಸಾಗುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆ ಮೇಲೆ ಪಲ್ಟಿಯಾಗಿದ್ದು, ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರಬಹುದು ಎನ್ನಲಾಗಿದೆ.
ಇನ್ನು ಕಾರು ಸಂಪೂರ್ಣ ತಲೆಕೆಳಗಾಗಿ ಮಗುಚಿ ಬಿದ್ದಿದ್ದು, ಸ್ಥಳಿಯರು ಚಾಲಕನನ್ನು ಹೊರ ತೆಗೆದಿದ್ದಾರೆ.
Follow us on Social media