ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ಶತಕದತ್ತ ದಾಪುಗಾಲನ್ನಿಟ್ಟಿದೆ.
ಗುರುವಾರದಂದು ಮತ್ತೆ 7 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 99 ಕ್ಕೇರಿಕೆ ಏರಿಕೆಯಾಗಿದೆ.
ದಾವಣಗೆರೆ ಮೂಲದ 36 ವರ್ಷದ ಯುವಕ, ಭಟ್ಕಳ ಮೂಲದ 69 ವರ್ಷದ ವೃದ್ಧ, ಕೇರಳದ ಪಾಲಕ್ಕಾಡ್ ನಿವಾಸಿ 52 ವರ್ಷದ ವ್ಯಕ್ತಿ, ಮಂಗಳೂರು ಮೂಲದ 53 ವರ್ಷದ ವ್ಯಕ್ತಿ, ಮಂಗಳೂರು ಮೂಲದ 79 ವರ್ಷದ ವೃದ್ಧ, ಮಂಗಳೂರು ಮೂಲದ 58 ವರ್ಷದ ಮಹಿಳೆ, ಬಂಟ್ವಾಳ ಮೂಲದ 52 ವರ್ಷದ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
Follow us on Social media