ಮಂಗಳೂರು: ತಮ್ಮನ್ನು ಕೆಪಿಟಿ ವಿದ್ಯಾರ್ಥಿಗಳು ಎಂದು ಹೇಳಿ ತಮಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ ಖಾಸಗಿ ಸಿಟಿ ಬಸ್ಸೊಂದರ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಕೂಳೂರಿನ ಕುದುರೆಮುಖ ಬಸ್ ನಿಲ್ದಾಣದ ಬಳಿ ನಡೆದಿದೆ.ಬಸ್ ಹತ್ತಿದ ಯುವಕರು ಕೆಪಿಟಿ ವಿದ್ಯಾರ್ಥಿಗಳು ಎಂದು ಹೇಳಿ ತಮಗೆ ಸಿ.ಆರ್. ಸೌಲಭ್ಯ ಅಂದರೆ ಕನ್ಸೆಶನ್ ರೇಟ್ ನೀಡ ಬೇಕೆಂದು ಕಂಡಕ್ಟರ್ ಬಳಿ ಒತ್ತಾಯಿಸಿದಾಗ ಕಂಡಕ್ಟರ್ ಅವರು ಯುನಿಫಾರ್ಮ್ ಇಲ್ಲದ ಆ ಯುವಕರಿಗೆ ಐಡಿ ಕಾರ್ಡ್ ತೋರಿಸಿ ಎಂದಿದ್ದಾರೆ.ಆಗ ಕೋಪಗೊಂಡ ಯುವಕರು ನಿರ್ವಾಹಕ ಮತ್ತು ನಿರ್ವಾಹಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ತಡೆಯಲು ಯತ್ನಿಸಿದ ಬಸ್ಸಿನ ಪ್ರಯಾಣಿಕರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Follow us on Social media