ಮಂಗಳೂರು : ಬಂದರ್ ಪ್ರದೇಶದಲ್ಲಿ ಕಂಕನಾಡಿಯ ಮಾರುಕಟ್ಟೆಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದು ಚಾಲಕನಿಗೆ ಹಲ್ಲೆ ಮಾಡಿದ ಘಟನೆ ನಗರದ ಫಳ್ನೀರ್‌ನಲ್ಲಿ ನಡೆದಿದೆ.
ಕುದ್ರೋಳಿಯ ರಶೀದ್ ಎಂಬ ವ್ಯಕ್ತಿ ಕಂಕನಾಡಿ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಹೊಂದಿರುವ ಝಾಕಿರ್ ಎಂಬವರ ಅಂಗಡಿಗೆ ಟೆಂಪೋದಲ್ಲಿ ಸುಮಾರು 200 ಕೆಜಿ ದನದ ಮಾಂಸವನ್ನು ಪರವಾನಿಗೆ ಸಹಿತವಾಗು ಸಾಗಾಟ ಮಾಡಿದ್ದು ಈ ಸಂದರ್ಭದಲ್ಲಿ ಐದಾರು ಮಂದಿ ಕಾರು ಹಾಗೂ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ. ಹಾಗೆಯೇ ಮಾಂಸಕ್ಕೆ ಸೀಮೆಎಣ್ಣೆ ಹಾಕಿದ್ದಾರೆ. ಜನ ಸೇರಿದ ಕಾರಣ ಅವರು ಪರಾರಿಯಾಗಿದ್ದಾರೆ ಎಂದು ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಕಳೆದ ವಾರ ಕೊಟ್ಟಾರ ಬಳಿ ಗೋಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು.
Follow us on Social media