ಮಂಗಳೂರು : ನಗರದ ಪಬ್ ವೊಂದರಲ್ಲಿ ನಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆಯೊಡ್ಡಿರುವ ಘಟನೆ ಜುಲೈ 25ರ ಸೋಮವಾರ ರಾತ್ರಿ ಮಂಗಳೂರಿನಲ್ಲಿ ವರದಿಯಾಗಿದೆ. ನಗರದ ರಿಸೈಕಲ್ ದಿ ಲಾಂಜ್ ಪಬ್ ನಲ್ಲಿ ಪಾರ್ಟಿ ನಡೆಯುತ್ತಿತ್ತು, ಅಲ್ಲಿಗೆ ತೆರಳಿದ ಸಂಘಟನೆ ಕಾರ್ಯಕರ್ತರು ಪಾರ್ಟಿ ತಡೆದಿದ್ದಾರೆ.
- ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಯುವಕ – ಯುವತಿಯರು ಕುಡಿದು ಮೋಜು – ಮಸ್ತಿಯಲ್ಲಿ ತೊಡಗಿದ್ದ ಆರೋಪ ವ್ಯಕ್ತವಾಗಿದೆ. ಪದವಿ ವಿದ್ಯಾರ್ಥಿಗಳಿಂದ ಪಬ್ ನಲ್ಲಿ ಮೋಜು ಮಸ್ತಿ ಹಿನ್ನೆಲೆ ಪಾರ್ಟಿ ನಡೆಯುತ್ತಿದ್ದ ರಿ-ಸೈಕಲ್ ದಿ ಲಾಂಜ್ ಪಬ್ ನೊಳಗೆ ಹೋಗಿ ಬಜರಂಗದಳದ ಕಾರ್ಯಕರ್ತರು ಪಾರ್ಟಿ ನಿಲ್ಲಿಸಿದ್ದಾರೆ.ಪಾರ್ಟಿ ನಿಲ್ಲಿಸುವಂತೆ ಸೂಚಿಸಿ ಬಜರಂಗದ ಕಾರ್ಯಕರ್ತರು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ. ಬಳಿಕ ಮಧ್ಯ ಪ್ರವೇಶಿಸಿ ಬಜರಂಗದಳದ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದಾರೆ. ಸದ್ಯ ಪಾರ್ಟಿ ಅರ್ಧದಲ್ಲೇ ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಪಬ್ ನಿಂದ ತೆರಳಿದ್ದಾರೆ. ತುಂಡುಡುಗೆ ತೊಟ್ಟು ಕುಡಿದು ವಿದ್ಯಾರ್ಥಿಗಳಿಂದ ಮೋಜು ಮಸ್ತಿ ನಡೆಸಲಾಗುತ್ತಿತ್ತು ಎಂದು ಸಂಘಟನೆ ಆರೋಪಿಸಿದೆ.