ಉಳ್ಳಾಲ: ಉಳ್ಳಾಲ ದರ್ಗಾದಿಂದ ಅಲೇಕಳಕ್ಕೆ ಹೋಗುವ ರಸ್ತೆಯ ಮಿಲ್ಲತ್ ನಗರ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ರಸ್ತೆಗೆ ಉರುಳಿರುವ ಘಟನೆ ಸಂಭವಿಸಿದೆ.
ಬೆಳಗ್ಗಿನ ಸಮಯವಾಗಿ ರುವುದರಿಂದ ವಾಹನಗಳು ರಸ್ತೆಗಳಲ್ಲಿ ಇರದೆ ಸಂಭಾವ್ಯ ಅನಾಹುತ ತಪ್ಪಿದೆ.
ನೋಟೀಸ್ ಜಾರಿ: ಘಟನಾ ಸ್ಥಳಕ್ಕೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ಮೆಸ್ಕಾಂ ಇಲಾಖೆಗೆ ತಕ್ಷಣಕ್ಕೆ ದುರಸ್ತಿ ನಡೆಸಲು ಸೂಚಿಸಿದರು.
ಮಳೆ ನೀರು ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಚರಂಡಿ ಕಾಮಗಾರಿಯನ್ನು ಆರಂಭಿಸಲಾಗಿತ್ತು.
ಕಾಮಗಾರಿ ಸಂದರ್ಭ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ಕಂಬ ರಸ್ತೆಗೆ ಉರುಳಿದೆ. ಮೂರು ದಿನಗಳ ಹಿಂದೆ ಮೆಸ್ಕಾಂ ಇಂಜಿನಿಯರ್‌ಗೆ ಟ್ರಾನ್ಸ್ ಫಾರ್ಮರ್ ಅಪಾಯ ಸ್ಥಿತಿಯಲ್ಲಿ ಇರುವುದನ್ನು ಗಮನಕ್ಕೆ ತಂದರೂ ದುರಸ್ತಿಗೆ ಮುಂದಾಗಿರಲಿಲ್ಲ.
ಈ ನಿಟ್ಟಿನಲ್ಲಿ ಸಂಬಂಧಿತ ಇಂಜಿನಿಯರ್‌ಗೆ ನೋಟೀಸು ನೀಡುವುದಾಗಿ ತಿಳಿಸಿದರು.
Follow us on Social media