ಮಂಗಳೂರು : ಇಂದಿನಿಂದ ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್ ಮುಂದುವರೆಯಲಿದ್ದು ಹಲವು ಕಡೆಗಳಲ್ಲಿ ಸಡಿಲಿಕೆ ಮಾಡಲಾಗಿದೆ. ದ. ಕ. ಜಿಲ್ಲೆಯಲ್ಲಿ ವೈನ್ ಅಂಗಡಿಗಳಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ರವರೆಗೆ ತೆರೆಯಲು ಅನುಮತಿ ನೀಡಲಾಗಿದ್ದು ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವೈನ್ ಶಾಪ್‌ಗಳ ಮುಂದೆ ಕುಡುಕರು ಸಾಲು ನಿಂತಿದ್ದಾರೆ.
ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾದ ಕಾರಣ ಹಲವು ವೈನ್ ಶಾಪ್‌ಗಳ ಮುಂದೆ ಭಾನುವಾರವೇ ಗ್ರಾಹಕರು ನಿಲ್ಲಲು ಸ್ಥಳಕ್ಕೆ ಗುರುತು ಹಾಕಲಾಗಿದ್ದು ಕೆಲವರಂತು ಇದ್ದ ಸ್ಟಾಕ್‌ಗಳು ಖಾಲಿಯಾಗಬಹುದೆಂಬ ಭಯಕ್ಕೋ ಏನೋ ಭಾನುವಾರವೇ ವೈನ್ ಶಾಪ್‌ಗಳ ಮುಂದೆ ಬಂದು ನಿಂತಿದ್ದಾರೆ.
ಒಬ್ಬರಿಗೆ ನಿಗದಿತ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಲಾಗುವುದಾದರೂ ಕೆಲ ಕುಡುಕರು ದೊಡ್ಡ ಚೀಲವನ್ನೇ ಹಿಡಿದು ಭಾನುವಾರ ರಾತ್ರಿಯಿಂದಲ್ಲೇ ವೈನ್ ಶಾಪ್‌ಗಳ ಮುಂದೆ ಕ್ಯೂ ನಿಂತಿದ್ದಾರೆ.
Follow us on Social media