ನವದೆಹಲಿ : ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಗುರುವಾರ 78 ಸಾವಿರದ ಗಡಿ ದಾಟಿದೆ. ಮುಂಬೈ, ಚೆನ್ನೈ, ಅಹಮದಾಬಾದ್ ಮತ್ತು ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕೇಂದ್ರ ಸರ್ಕಾರ ನಿನ್ನೆ ಉದ್ಯಮ ವಲಯಕ್ಕೆ ಈ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚುವರಿ ಹಣದ ಹರಿವು ಮತ್ತು ಪ್ರೋತ್ಸಾಹ ಕ್ರಮವಾಗಿ 6 ಲಕ್ಷ ಕೋಟಿ ರೂಪಾಯಿಯನ್ನು ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಭಾರತದಲ್ಲಿ ಕೊರೋನಾಗೆ ಇದುವರೆಗೆ ಸಾವಿನ ಸಂಖ್ಯೆ 2,500ರ ಗಡಿ ದಾಟಿದ್ದು 2,549 ಮಂದಿ ಮೃತಪಟ್ಟಿದ್ದಾರೆ. 26,235 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 134 ಮಂದಿ ಮೃತಪಟ್ಟಿದ್ದು 3,722 ಹೊಸ ಕೇಸುಗಳು ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ವಲಸೆ ಕಾರ್ಮಿಕರ ಪ್ರಯಾಣ ಕೊರೋನಾ ವೈರಸ್ ಮತ್ತಷ್ಟು ಹಬ್ಬಲು ಕಾರಣವಾಗಬಹುದು ಎಂಬ ಆತಂಕ ಸೃಷ್ಟಿಸಿದೆ.
ವಿದೇಶಗಳಿಂದ ಭಾರತಕ್ಕೆ ಬಂದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೇರಳದಲ್ಲಿ ಕೆಲವು ಜನರಲ್ಲಿ ಸೋಂಕು ವರದಿಯಾಗಿದೆ.
Follow us on Social media