ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಐದು ತಾತ್ಕಾಲಿಕ ಸದಸ್ಯತ್ವಕ್ಕಾಗಿ ಜೂನ್ 17 ರಂದು ಚುನಾವಣೆ ನಡೆಸಲು ವಿಶ್ವಸಂಸ್ಥೆ ನಿರ್ಧರಿಸಿದೆ.
ಏಷ್ಯಾ ಪೆಸಿಫಿಕ್ ವಲಯದ ಸ್ಥಾನಕ್ಕೆ ಭಾರತ ಏಕಮಾತ್ರ ಸ್ಪರ್ಧಿಯಾಗಿರುವುದರಿಂದ ಚುನಾವಣೆ ಕೇವಲ ಔಪಚಾರಿಕ ಪ್ರಕ್ರಿಯೆ ಎಂಬಂತೆ ಕಾಣಿಸುತ್ತಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆಗೆ ವಿಶ್ವಸಂಸ್ಥೆ ವಿಶೇಷ ವ್ಯವಸ್ಥೆ ಮಾಡುತ್ತಿದೆ. ಈ ಸಂಬಂಧ 193 ಸದಸ್ಯ ದೇಶಗಳ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಯ ಕುರಿತು ವಿಶೇಷ ನಿರ್ಣಯ ಅಂಗೀಕರಿಸಿದೆ.
2021-22ರ ಅವಧಿಗೆ ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಭಾರತದ ನಾಮ ನಿರ್ದೇಶನವನ್ನು, ಕಳೆದ ವರ್ಷ ಜೂನ್ ನಲ್ಲಿ ಚೀನಾ, ಪಾಕಿಸ್ತಾನ ಸೇರಿ 55 ದೇಶಗಳು ಬೆಂಬಲಿಸಿದ್ದವು. ಭಾರತ ಕೊನೆಯ ಬಾರಿಗೆ 2011-12ರಲ್ಲಿ ಭದ್ರತಾ ಮಂಡಳಿ ತಾತ್ಕಾಲಿಕ ಸದಸ್ಯ ದೇಶವಾಗಿ ಸೇವೆ ಸಲ್ಲಿಸಿತ್ತು.
Follow us on Social media