ಬೆಳ್ತಂಗಡಿ : ಉಜಿರೆಯ ಪೆಟ್ರೋಲ್ ಬಂಕ್‌ನ ಉದ್ಯೋಗಿಗೆ ಕೊರೊನಾ ಪಾಸಿಟಿವ್ ಆದ ಹಿನ್ನಲೆಯಲ್ಲಿ ಜೂನ್ 27 ರ ಶನಿವಾರದಂದು ಉಜಿರೆಯ ಪೆಟ್ರೋಲ್ ಬಂಕ್ ಅನ್ನು ಸೀಲ್‌ಡೌನ್ ಮಾಡಲಾಗಿದೆ.
ಉಜಿರೆಯ ಪೆಟ್ರೋಲ್ ಬಂಕ್‌ನಲ್ಲಿ ಉದ್ಯೋಗಿಯಾಗಿದ್ದ ಮುಂಡಜೆಯ ಅಗಾರಿ ನಿವಾಸಿ 38 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ ಸೋಂಕಿತೆಯ ಸಂಪರ್ಕದಲ್ಲಿದ್ದ ಉಜಿರೆ ಮಾರುಕಟ್ಟೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ಸೇರಿ ಸುಮಾರು 50 ಕ್ಕೂ ಅಧಿಕ ಜನರ ಗಂಟಲ ದ್ರವದ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿದೆ.
ಶನಿವಾರ ಮಹಿಳೆಯ ಕೊರೊನಾ ವರದಿ ಬಂದಿದ್ದು ಈ ಸಂದರ್ಭದಲ್ಲಿ ಮಹಿಳೆ ಪೆಟ್ರೋಲ್ ಬಂಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಕಾರಣದಿಂದಾಗಿ ಸ್ವಲ್ಪ ಸಮಯದವರೆಗೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಇನ್ನು ಮಹಿಳೆಯ ಪತಿ ಲಾಕ್‌ಡೌನ್‌ಗೂ ಮುನ್ನ ಮಂಡ್ಯಕ್ಕೆ ಹೋಗಿದ್ದು ಇತ್ತೀಚೆಗೆ ಮುಂಡಜೆಗೆ ವಾಪಾಸ್ ಬಂದಿದ್ದರು.
ಮಹಿಳೆಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಮಹಿಳೆ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿಗಳು, ಮಹಿಳೆ ಭೇಟಿ ನೀಡಿದ್ದ ಸೋಮಂತಡ್ಕದ ಅಂಗಡಿಯೊಂದರ ನೌಕರರು ಸೇರಿದಂತೆ ಸೋಂಕಿತ ಮಹಿಳೆಯ ಕುಟುಂಬಸ್ಥರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಹಾಗೆಯೇ ಮಹಿಳೆ ಉದ್ಯೋಗ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಮತ್ತು ಸೋಂಕಿತ ಮಹಿಳೆಯ ನಿವಾಸವನ್ನು ಸೀಲ್‌ಡೌನ್ ಮಾಡಲಾಗಿದ್ದು ಸೋಂಕಿತ ಮಹಿಳೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow us on Social media