ಬೆಳಗಾವಿ: ಮಣ್ಣು ಅಗೆಯುವಾಗ ಗುಡ್ಡ ಕುಸಿದು ಇಬ್ಬರು ಕಾರ್ಮಿಕ ಯುವಕರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಿರನೋಳಿ ಗ್ರಾಮದ ಕೆಂಪಗುದ್ದಿ ಗುಡ್ಡದ ಸಮೀಪ ನಡೆದಿದೆ.
ಮೃತರನ್ನು ಬಿರನೋಳಿ ಗ್ರಾಮದ ಯಲ್ಲಪ್ಪಾ ಹರಿಜನ (22) ಹಾಗೂ ಹಾಲಪ್ಪಾ ಗುರವ (24) ಎಂದು ಗುರುತಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Follow us on Social media