ಬೆಂಗಳೂರು: ಸೋಂಕಿತರಿಗೆ ಹಾಸಿಗೆ ನೀಡದೆ ನಿರ್ಲಕ್ಷ್ಯ ತೋರಿದ್ದ ನಗರದ 19 ಆಸ್ಪತ್ರೆಗಳ ಪರವಾನಗಿಗಳನ್ನು ಬಿಬಿಎಂಪಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿರುವ ನಗರದ ಸಣ್ಣ ಆಸ್ಪತ್ರೆಗಳು ನಮ್ಮನ್ನು ಟಾರ್ಗೆಟ್ ಮಾಡಿಕೊಳ್ಳಬೇಡಿ ಎಂದು ತಿಳಿಸಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿರುವ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘ (ಫನಾ), 50 ಹಾಸಿಗೆಗಳಿಗಿಂತ ಕಡಿಮೆ ಇರುವ ಸಣ್ಣ ಆಸ್ಪತ್ರೆಗಳು ಮೂಲಸೌಕರ್ಯ ಮತ್ತು ನರ್ಸ್ ಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೋವಿಡ್ ಪ್ರಕರಣಗಳಿಗೆ ಶೇ .50 ರಷ್ಟು ಹಾಸಿಗೆಗಳ ಮೀಸಲಾತಿಯನ್ನು ಜಾರಿಗೊಳಿಸದಂತೆ ಬಿಬಿಎಂಪಿಗೆ ಒತ್ತಾಯಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ನೇಮಕಗೊಳಿಸುವ ಸರ್ಕಾರದ ಕಡ್ಡಾಯ ನಿಯಮಗಳನ್ನು ನೋಡಿದರೆ, ಆಸ್ಪತ್ರೆಗಳ ಮುಂದೆ ಹಾಕಲಾಗುತ್ತಿರುವ ಬ್ಯಾನರ್‌ಗಳು ಮತ್ತು ಮುಚ್ಚುವ ಬೆದರಿಕೆಗಳಾದ ಬಿಬಿಎಂಪಿಯ ಕ್ರಮವು ವೈದ್ಯರನ್ನು ಮತ್ತು ಆರೋಗ್ಯ ಕಾರ್ಯಕರ್ತರನ್ನು ನಿರಾಶೆಗೊಳಿಸುವುದಲ್ಲದೆ, ಸಮುದಾಯಕ್ಕೆ ತಪ್ಪು ಭಾವನೆಗಳನ್ನು ದೊಡ್ಡ ಮಟ್ಟದಲ್ಲಿ ಕಳುಹಿಸುತ್ತಿದೆ ಎಂದು ತಿಳಿಸಿದೆ.
ವಿನಾಯಕ ಆಸ್ಪತ್ರೆಯ ಮಾಲೀಕ ಡಾ.ಅಶೋಕ್ ರಾವ್ ಅವರು ಮಾತನಾಡಿ, ಕೊರೋನಾ ವೈರಸ್ ಬರುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಸಿಬ್ಬಂದಿಗಳು ಹೆದರಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿಂದಾಗಿ ಒಂದು ಮಹಡಿಯಲ್ಲಿನ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದೇವೆ. ಇನ್ನೊಂದು ಮಹಡಿಯಲ್ಲಿ 6-7 ಹಾಸಿಗೆಗಳಿದ್ದು, ಕೇವಲ 3-4 ಸಿಬ್ಬಂದಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಹೆರಿಗೆ ಆರೈಕೆ ಶ್ರಮದಾಯಕವಾಗಿದ್ದು, ಒಬ್ಬ ನರ್ಸ್ ಮಗುವನ್ನು ನೋಡಿಕೊಂಡರೆ, ಮತ್ತೊಬ್ಬರು ತಾಯಿ ಆರೋಗ್ಯ ನೋಡಬೇಕಾಗುತ್ತದೆ. ಇನ್ನು ಸ್ತ್ರೀರೋಗತಜ್ಞರು ಮತ್ತು ಪ್ರಸೂತಿ ವೈದ್ಯರು ತುರ್ತು ಪ್ರಕರಣಗಳನ್ನು ನೋಡಬೇಕಾಗುತ್ತದೆ. ಸಣ್ಣ ಆಸ್ಪತ್ರೆಯಾಗಿರುವುದರಿಂದ ಒಳ ಪ್ರವೇಶ ನಿರ್ಗಮನ ಮಾರ್ಗ ಒಂದೇ ಆಗಿರುತ್ತದೆ. ಈ ವೇಳೆ ಕೊರೋನಾ ಇರುವ ಹಾಗೂ ಸೋಂಕು ಇಲ್ಲದ ವ್ಯಕ್ತಿಗಳು ಒಂದೇ ಮಾರ್ಗದಲ್ಲಿ ಓಡಾಡಬೇಕಾಗುತ್ತದೆ. ಇದರಿಂದ ಸೋಂಕು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
25-30 ಹಾಸಿಯಿರುವ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಸಮಸ್ಯೆಗಳಿರುತ್ತವೆ. ಫುಲ್ ಟೈಮ್ ನಲ್ಲಿ ಕೆಲಸ ಮಾಡುವ ವೈದ್ಯರು ನಮ್ಮ ಆಸ್ಪತ್ರೆಯಲ್ಲಿಲ್ಲ. ಕನ್ಸಲ್ಟೇಷನ್ ಇದ್ದರೆ ಮಾತ್ರ ವೈದ್ಯರು ಆಸ್ಪತ್ರೆಗೆ ಬರುತ್ತಾರೆಂದು ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಾಲೀಕ ಡಾ.ವಿಶ್ವನಾಥ್ ಭಟ್ ಅವರು ತಿಳಿಸಿದ್ದಾರೆ.
ಅವರು ಪ್ರಸ್ತಾಪಿಸಿದ ಮತ್ತೊಂದು ಕಾರಣವೆಂದರೆ, ಇದು ಇತರ ಸಣ್ಣ ಆಸ್ಪತ್ರೆಗಳಿಗೂ ಸಾಮಾನ್ಯವಾಗಿದೆ, ಕೋವಿಡ್ ಮತ್ತು ಕೋವಿಡ್ ಅಲ್ಲದ ರೋಗಿಗಳಿಗೆ ಒಂದೇ ಪ್ರವೇಶ ಮತ್ತು ನಿರ್ಗಮನವು ಅಡ್ಡ-ಮಾಲಿನ್ಯದ ಅಪಾಯವನ್ನು ಹೆಚ್ಚಿಸುತ್ತದೆ.
Follow us on Social media