Breaking News

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್​ ಮನೆ ಮೇಲೆ ಕಲ್ಲು ತೂರಾಟ, ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ; ಉದ್ವಿಗ್ನ ಸ್ಥಿತಿ

ಬೆಂಗಳೂರು: ಪುಲಕೇಶಿ ನಗರದ ಶಾಸಕ ಅಖಂಡ​ ಶ್ರೀನಿವಾಸ್​ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.

ಇವರ ಬಾಮೈದನೋರ್ವ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಈ ಕಲ್ಲು ತೂರಾಟ ನಡೆದಿದೆ.

ಶಾಸಕರ ಮನೆ ಮೇಲೆ ಕಲ್ಲುತೂರಾಟ ನಡೆದಿದ್ದಲ್ಲದೆ, ಕಚೇರಿಯ ಬಳಿ ನಿಂತಿದ್ದ ವಾಹನಗಳಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸಿಕ್ಕಸಿಕ್ಕ ವಾಹನಗಳಿಗೆಲ್ಲ ಕಲ್ಲು ಹೊಡೆಯುತ್ತಿದ್ದಾರೆ. ಗಲಾಟೆ ನಡೆಯುತ್ತಿರುವ ಸ್ಥಳಕ್ಕೆ ಶಾಸಕ ಜಮೀರ್ ಅಹ್ಮದ್​ ಭೇಟಿ ನೀಡಿದ್ದಾರೆ.

ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ದುಷ್ಕರ್ಮಿಗಳು ಪೊಲೀಸರ ವಾಹನಗಳನ್ನೂ ಧ್ವಂಸ ಮಾಡಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×