ಬೆಂಗಳೂರು: ಮದ್ಯ ಮಾರಾಟ ಆರಂಭವಾದ ಖುಷಿಯಲ್ಲಿದ್ದ ಮದ್ಯಪ್ರಿಯರು ಈ ಹಿಂದಿಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿ ಮಾಡಬೇಕಾಗಿದೆ.
ಕಳೆದ ಮಾರ್ಚ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದ ಆಯವ್ಯಯದಲ್ಲಿ ವಿವಿಧ ಮದ್ಯಗಳ ಮೇಲಿನ ತೆರಿಗೆಯನ್ನು ಶೇ.6ರಷ್ಟು ಹೆಚ್ಚಳ ಮಾಡಿದ್ದರು. ಈ ದರ ಏಪ್ರಿಲ್ ಒಂದರಿಂದ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು.
ಲಾಕ್’ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಮದ್ಯ ಮಾರಾಟ ಆರಂಭವಾದ ಹಿನ್ನೆಲೆಯಲ್ಲಿ ಇದೀಗ ಹೆಚ್ಚಳ ಮಾಡಿದ್ದ ತೆರಿಗೆ ಇದೀಗ ಜಾರಿಗೊಳ್ಳುತ್ತಿದೆ.
ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.6ರಷ್ಟು ಹೆಚ್ಚಿಸಿರುವುದರಿಂದ ವಿವಿಧ ಬ್ರ್ಯಾಂಡ್’ಗಳ ಮದ್ಯದ ಪ್ರತಿ 180 ಎಂಎಲ್ ಮೇಲಿನ ದರವು ಕನಿಷ್ಟ ರೂ.3ರಿಂದ ರೂ30ರವರೆಗೂ ಹೆಚ್ಚಳವಾಗಿದ್ದು, ಮದ್ಯಪಾನ ಮಾಡುವವರ ಕಿಸೆಗೆ ಕತ್ತರಿ ಬೀಳಲಿದೆ.
Follow us on Social media