ಬಂಟ್ವಾಳ : ವಿದ್ಯುತ್ ಶಾಕ್ ಹೊಡೆದು ಕೃಷಿಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಗುಂಡಿಮಜಲು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಗುಂಡಿಮಜಲು ನಿವಾಸಿ ಬಾಸ್ಕರ್ ಗೌಡ ಅವರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟವರು.
ಭಾಸ್ಕರ್ ಗೌಡ ಅವರು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಮನೆಗೆ ನೀರು ಸಂಗ್ರಹಕ್ಕಾಗಿ ತೋಟದಲ್ಲಿರುವ ಕೃಷಿ ಪಂಪ್ ಸೆಟ್ ನ ಸ್ವಿಚ್ ಹಾಕಲು ತೆರಳಿದ್ದರು. ಮನೆಯ ಯಜಮಾನ ಸುಮಾರು ಹೊತ್ತು ಆದರೂ ಮನೆಗೆ ಬಂದಿಲ್ಲ ಎಂದು ಪತ್ನಿ ಪ್ರಿಯಾಂಕ ಅವರು ಪಂಪ್ ಹೌಸ್ ಬಳಿ ತೆರಳಿ ನೋಡಿದಾಗ ಕೆಳಗೆ ಬಿದ್ದಿದ್ದರು. ಅವರು ಪಂಪ್ ಸ್ವಿಚ್ ಅದುಮಿದಾಗ ಸ್ವಿಚ್ ಬೋರ್ಡ್ ನಲ್ಲಿ ವಿದ್ಯುತ್ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ವಿಟ್ಲ ಠಾಣಾ ಎಸ್. ಐ.ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಭಾಸ್ಕರ ಅವರ ಮೃತದೇಹ ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಮರಣೋತ್ತರ ಪರೀಕ್ಷೆ ಗಾಗಿ ಇರಿಸಲಾಗಿದೆ.
Follow us on Social media