ಬಂಟ್ವಾಳ : ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿನ್ನಿಗೋಳಿ ಮೂಲದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಿನ್ನಿಗೊಳಿ ಕೊಲ್ಲೂರು ನಿವಾಸಿ ಆರೋಪಿ ಅಶ್ವಥ ಪ್ರಕರಣದ ಆರೋಪಿಯಾಗಿದ್ದಾನೆ. ಈತ ಬಾಲಕಿಗೆ ಮದುವೆಯ ಭರವಸೆ ನೀಡಿ ಎರಡು ಬಾರಿ ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ. ಎರಡನೇ ಬಾರಿ ಅತ್ಯಾಚಾರ ಎಸಗಿದ ಕಾರಣ ಬಾಲಕಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣಾ ದಾಖಲಾಗಿದೆ.
ಪ್ರಕರಣದ ವಿವರ:
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಉಪ್ಪುಗುಡ್ಡೆ ನಿವಾಸಿಯಾಗಿರುವ ಬಾಲಕಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಳು. ಈಕೆ 2 ವರ್ಷಗಳ ಹಿಂದೆ ಕಿನ್ನಿಗೋಳಿಗೆ ತನ್ನ ಸ್ನೇಹಿತೆಯ ಮದುವೆಗೆ ತೆರಳಿದ್ದ ವೇಳೆ ಕಿನ್ನಿಗೊಳಿ ಕೊಲ್ಲೂರು ನಿವಾಸಿ ಆರೋಪಿ ಅಶ್ವಥನ ಪರಿಚಯವಾಗಿತ್ತು. ಬಳಿಕ ಇಬ್ಬರೂ ಮೊಬೈಲ್‌ನಲ್ಲಿ ಅನ್ಯೋನ್ಯವಾಗಿ ಮಾತನಾಡಿಕೊಂಡಿದ್ದರು.
ಕಳೆದ ವರ್ಷ ಜುಲೈನಲ್ಲಿ ಬಾಲಕಿಯು ಅಶ್ವಥನ ಮನೆಗೆ ಹೋಗಿದ್ದಾಗ ಮಧ್ಯಾಹ್ನ ಸಮಯ ಅಶ್ವಥನು ಅಲ್ಲೇ ಪಕ್ಕದಲ್ಲಿರುವ ಆತನ ಅಣ್ಣನ ಖಾಲಿಯಿರುವ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆ ನಂತರವೂ ಇಬ್ಬರೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಕಳೆದ ವರ್ಷ ಅ. 24ರಂದು ಕಾಲೇಜಿಗೆ ರಜೆ ಇದ್ದು, ಆ ದಿನವೂ ಬಾಲಕಿ ಅಶ್ವಥನ ಮನೆಗೆ ಹೋಗಿದಾಗಲೂ ಆತ ಮತ್ತೆ ದೈಹಿಕ ಸಂಪರ್ಕ ಮಾಡಿರುತ್ತಾನೆ. ದೈಹಿಕ ಸಂಪರ್ಕ ಮಾಡಿದ್ದರಿಂದ ಬಾಲಕಿಯು ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಲು ಅಶ್ವಥನು ಕಾರಣನಾಗಿರುತ್ತಾನೆ. ಹೀಗಾಗಿ ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
Follow us on Social media