ಬಂಟ್ವಾಳ: ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಯೊಂದಕ್ಕೆ ಪುಂಜಾಲಕಟ್ಟೆ ಎಸ್.ಐ.ಸುತೇಶ್ ನೇತೃತ್ವದ ತಂಡ ದಾಳಿ ನಡೆಸಿ,
2 ಕಿಂಟ್ವಾಲ್ ಗೂ ಅಧಿಕ ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳದ ಪುತ್ತಿಲ ಗ್ರಾಮದಲ್ಲಿ ಇಂದು ನಡೆದಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಲ ಗ್ರಾಮದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ದಟ್ಟ ಕಾಡಿನ ಮಧ್ಯೆ
ಎರಡು ಶೆಡ್ಗಳನ್ನು ಹಾಕಿ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಮಾಂಸ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಮೂರರಿಂದ ನಾಲ್ಕು ಜನ ಆರೋಪಿಗಳು ದನ ಕಡಿದು ವ್ಯಾಪಾರ ವಹಿವಾಟು ನಡೆಸುವ ಬಗ್ಗೆ ಪೋಲೀಸರಿಗೆ ಮಾಹಿತಿ ಇದ್ದು, ಇದೊಂದು ದೊಡ್ಡ ಮಟ್ಟದ ಜಾಲವಾಗಿದ್ದು,
ಕಾಡಿನ ಮಧ್ಯೆ ಯಾರು ಹೋಗದಂತಹ ಸ್ಥಳದಲ್ಲಿ ಅನೇಕ ವರ್ಷಗಳಿಂದ ಅಕ್ರಮ ದನ ಕಡಿಯುವ ಕೆಲಸಗಳು ನಡೆಯುತ್ತಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
Follow us on Social media