ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಹಿಂದೂ ಮಹಾಸಭಾ ಕಿಡಿ ಕಾರಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರ ಅಮೀನ್, ನಳೀನ್ ಅವ್ರೆ ತಾಕತ್ತಿದ್ರೆ ಪಕ್ಷೇತರರಾಗಿ ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿರಿ.
ಅರುಣ್ ಪುತ್ತಿಲ ಅವ್ರ ಶೇಕಡಾ 10ರಷ್ಟು ಮತವನ್ನ ಪಡೆದು ತೋರಿಸಿ ಎಂದು ಸವಾಲು ಹಾಕಿದರು.
ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ , ಸತ್ಯಜಿತ್, ತಿಮರೋಡಿ ಬಗ್ಗೆ ಮಾತಾಡ್ತಾರೆ. ಅವ್ರ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಬಿಜೆಪಿ ಶಾಸಕರಿಗೆ..?
ಅಧಿಕಾರ ಸಿಕ್ಕಿದ ಕೂಡ್ಲೇ ಬಾಯಿಗೆ ಬಂದಾಗೆ ಮಾತಾಡೋದು ತಪ್ಪು. ಹೇಗೆ ಪೀಠದಲ್ಲಿ ಕೂರಿಸಿದ್ದೇವೋ, ಹಾಗೆಯೇ ಇಳಿಸೋದು ಗೊತ್ತು ಎಂದು ಎಚ್ಚರಿಸಿದರು.
ಇದೇ ಸಂದರ್ಭ ಮಾತನಾಡಿದ ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ, ದಿವಂಗತ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಹಾಯಹಸ್ತ ಮಾಡಿದ್ದು ಹಿಂದೂ ಸಂಘಟನೆ ಕಾರ್ಯಕರ್ತರು.
ನೆನಪಿಟ್ಟುಕೊಳ್ಳಿ ಬಿಜೆಪಿಯವರು ಸಹಾಯ ಮಾಡಿಲ್ಲ. ನೆಟ್ಟಾರ್ ಕುಟುಂಬಕ್ಕೆ ನಳಿನ್ ಕುಮಾರ್ ಕಟೀಲ್ ಮನೆಕಟ್ಟಿಕೊಟ್ರು ಅಂತ ಹೇಳ್ತಾರೆ.
ನಳೀನ್ ಅವ್ರ ಕಾರು ಅಲುಗಾಡಿಸಿದ್ದಕ್ಕೆ ಮನೆ ಕಟ್ಟಿಕೊಟ್ರು. ನಿಜವಾಗಿ ನಳೀನ್ ಅವ್ರ ಕಾರನ್ನ ಅಲುಗಾಡಿಸಬಾರ್ದಿತ್ತು, ನಳೀನ್ ಅವ್ರನ್ನೇ ಅಲುಗಾಡಿಸಬೇಕಿತ್ತು ಎಂದರು.
Follow us on Social media