ಪುತ್ತೂರು : ಇಲ್ಲಿನ ಸಮೀಪದ ಕೊಂಬೆಟ್ಟು ಎಂಬಲ್ಲಿ ಯುವಕನೊಬ್ಬ ರಸ್ತೆಯಲ್ಲಿ ಬಿದ್ದು ಹೈಡ್ರಾಮ ಸೃಷ್ಟಿಸಿದ ಘಟನೆ ನಡೆದಿದೆ.ಗದಗ ಮೂಲದ ಯುವಕ ಕಂಠ ಪೂರ್ತಿ ಕುಡಿದು ಕೈಗೆ, ಹೊಟ್ಟ್ರೆಗೆ ಬ್ಯಾಂಡೇಜ್ ಕಟ್ಟಿಕೊಂಡು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿರುವವನಂತೆ ಹೈಡ್ರಾಮ ಸೃಷ್ಟಿಸಿದ್ದ. ಈತನ ಪರಿಸ್ಥಿತಿ ಕಂಡು ಗಾಬರಿಯಿಂದ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸಾರ್ವಜನಿಕರ ನೆರವಿನಿಂದ ಯುವಕನನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದಾಗ ಯುವಕರು ಬ್ಯಾಂಡೇಜ್ ಸುತ್ತಿಕೊಂಡಿದ್ದ ಜಾಗದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ.ಬಳಿಕ ಯುವಕ ಬಿಳಿ ಬಟ್ಟೆಗೆ ಬಣ್ಣ ಸುರಿದು ಸೊಂಟಕ್ಕೆ ಸುತ್ತಿಕೊಂಡಿರುವುದು ಬೆಳಕಿಗೆ ಬಂದಿದೆ.
Follow us on Social media