Breaking News

ದಾದಾ ಕುಟುಂಬವನ್ನೂ ಕಾಡಿದ ಕೋವಿಡ್ ಕಂಟಕ: ಸೌರವ್ ಗಂಗೂಲಿ ಸೋದರನ ಪತ್ನಿ, ಅತ್ತೆ ಮಾವನಿಗೂ ವೈರಸ್ ಸೋಂಕು

ಕೋಲ್ಕತ್ತಾ: ಕೊರೋನಾವೈರಸ್ ಭಯ ಭೀತಿ ದೇಶಾದ್ಯಂತ ದಿನದಿನಕ್ಕೆ ವ್ಯಾಪಕವಾಗುತ್ತಿದ್ದು ಇದೀಗ ಟೀಂ ಇಡಿಯಾ ಮಾಜಿ ನಾಯಕ, ಹಾಲಿ  ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರ ಕುಟುಂಬ ಸದಸ್ಯರಿಗೂ ಸೋಂಕು ಇರುವುದು ದೃಢವಾಗಿದೆ. . ಗಂಗೂಲಿಯ ಹಿರಿಯ ಸಹೋದರ ಸ್ನೇಹಶೀಲ್ ಗಂಗೂಲಿ  ಅವರ ಪತ್ನಿ ಅಲ್ಲದೆ ಅವರ ಅತ್ತೆ, ಮಾವನಿಗೆ ಸಹ ಕೊರೋನಾ ಸೋಂಕು ತಗುಲಿದೆ.

ಇದಲ್ಲದೆ ಸ್ನೇಹಶೀಲ್ ಅವರ ಮನೆಯ ಪರಿಚಾರಕ  ಸಹ ವೈರಸ್ ಸೋಂಕಿಗೆ ಗುರಿಯಾಗಿದ್ದಾನೆ.

ಮಾಜಿ ರಣಜಿ ಮಟ್ಟದ ಕ್ರಿಕೆಟಿಗನಾಗಿರುವ ಸ್ನೇಹಶೀಲ್  ಸಹ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಅವರ ವರದಿಗಳು ನೆಗೆಟಿವ್ ಎಂದು ಬಂದಿದೆ. ಆದರೆ ಅವರಿಗೆ ಸಹ ಹೋಂ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಸೋಂಕಿತರೆಲ್ಲರನ್ನೂ ಖಾಸಗಿ ನರ್ಸಿಂಗ್ ಹೋಂಗೆ ದಾಖಲಾಗಿದ್ದು  ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಹಶೀಲ್ ಪ್ರಸ್ತುತ ಪ್ರಸ್ತುತ ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬಂಗಾಳದ (ಸಿಎಬಿ) ಕಾರ್ಯದರ್ಶಿಯಾಗಿದ್ದಾರೆ.

“ನಾಲ್ವರೂ ಕೆಲವು ಆರೋಗ್ಯ ಸಮಸ್ಯೆಗಳ ಬಗೆಗೆ ದೂರು ನೀಡಿದ್ದಾರೆ. ಅದು ಕೋವಿಡ್ 19 ರ ರೋಗಲಕ್ಷಣಗಳನ್ನು ಹೋಲುತ್ತದೆ, ಅವರು ಬೇಹಾಲಾದಲ್ಲಿನ ಗಂಗೂಲಿಯ ಪೂರ್ವಜರ ಮನೆಯಲ್ಲಲ್ಲದೆ ಇನ್ನೊಂದು ನಿವಾಸದಲ್ಲಿದ್ದರು. ಕೋವಿಡ್ ಪಾಸಿಟಿವ್ ಬಂದ ನಂತರ ನಾಲ್ವರನ್ನು ಖಾಸಗಿ ನರ್ಸಿಂಗ್ ಹೋಂಗೆ ಸ್ಥಳಾಂತರಿಸಲಾಯಿತು , “ಹಿರಿಯ ಅಧಿಕಾರಿಯೊಬ್ಬರು ಹೇಳಿದರು.ಅವರೆಲ್ಲರ ಬಗ್ಗೆ ಹೆಚ್ಚಿನ ಪರೀಕ್ಷೆಗಳನ್ನು ಶನಿವಾರ ಮಾಡಲಾಗುವುದು, ಅದರ ಆಧಾರದ ಮೇಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. “ಅವರನ್ನು ಬಿಡುಗಡೆ ಮಾಡಲಾಗುತ್ತದೆಯೋ ಇಲ್ಲವೋ ಎಂಬುದು ಪರೀಕ್ಷೆಗಳ ಫಲಿತಾಂಶವನ್ನು ಆಧರಿಸಿ ತೀರ್ಮಾನಿಸಲಾಗುತ್ತದೆ” ನರ್ಸಿಂಗ್ ಹೋಂನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಹಾವಳಿಯ ಕಾರಣ ಸಂಕಷ್ತಕ್ಕೆ ಈಡಾಗಿರುವ ಜನರಿಗೆ ಗಂಗೂಲಿ ಸಹಾಯಹಸ್ತ ನೀಡಿದ್ದಾರೆ. ಅವರು ಆರಂಭದಲ್ಲಿ ಪಶ್ಚಿಮ ಬಂಗಾಳದ ಬೇಲೂರು ಮಠದಲ್ಲಿ 2000 ಕೆಜಿ ಅಕ್ಕಿ ನೀಡಿದ್ದರು. ಅದಕ್ಕೆ ಮುನ್ನ ಲು ಬಡವರಿಗೆ 50 ಲಕ್ಷ ರೂ.ಕೊಟ್ಟಿದ್ದಲ್ಲದೆ ಇಸ್ಕಾನ್ ಕೇಂದ್ರದಲ್ಲಿ ಪ್ರತಿದಿನ 10,000 ಜನರಿಗೆ ಆಹಾರವನ್ನು ನೀಡುವುದಾಗಿ ವಾಗ್ದಾನ ಮಾಡಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×