ಮಂಗಳೂರು : ಭಾರತೀಯ ಸರ್ಕಾರವು ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಟಿಕ್ಟಾಕ್ ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದ ನಂತರ, ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತಿದ್ದ ಬಳಕೆದಾರರು ತಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾಗ ಸ್ವದೇಶೀ ಆಪ್ “ವಾಟ್ಸ್ಕಟ್ ಪ್ರೊ” ವರವಾಗಿ ಪರಿಣಮಿಸಿದೆ. ವಿಶೇಷ ಎಂದರೆ ಇದನ್ನು ಮಂಗಳೂರು ಪಿ. ಎ .ಕಾಲೇಜ್ ಆಫ್ ಎಂಜಿನಿಯರಿಂಗ್ ಮಂಗಳೂರು ಇದರ ಪೂರ್ವ ವಿದ್ಯಾರ್ಥಿಗಳ ತಂಡವು ಅಭಿವೃದ್ಧಿಪಡಿಸಿದ್ದು ಕಿರು ವೀಡಿಯೊ ಅಪ್ಲಿಕೇಶನ್ ವಾಟ್ಸ್ಕಟ್ ಇದಾಗಿದೆ.
ಪಿ. ಎ .ಕಾಲೇಜ್ ಆಫ್ ಎಂಜಿನಿಯರಿಂಗ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾಭ್ಯಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸುಶಿನ್ ಪಿ.ವಿ, ರಿಜ್ವಾನ್ ಸದಾತ್ ಮತ್ತು ರಮೀಸ್ ಪಿ ಇವರ ಕನಸಿನ ಕೂಸು “ವಾಟ್ಸ್ಕಟ್ ಪ್ರೊ”, ಇವರ ಯೋಜನೆಯನ್ನು 2017 ಕಾರ್ಯರೂಪಕ್ಕೆ ತಂದರು .ಇವರಿಗೆ ಎಸ್ಪಿಜೆಐಎಂಆರ್ ಮುಂಬೈನ ಹಳೆಯ ವಿದ್ಯಾರ್ಥಿ ವಿಕಾಸ್ ಶ್ರೀವಾಸ್ತವ ಸಾಥ್ ನೀಡಿದರು.
ಪ್ರಸ್ತುತ 1.7 ಮಿಲಿಯನ್ + ಡೌನ್ಲೋಡ್ಗಳನ್ನು ಹೊಂದಿದೆ ಮತ್ತು ಅದರ ಪ್ಲಾಟ್ಫಾರ್ಮ್ನಲ್ಲಿ 9 ಮಿಲಿಯನ್ಗಿಂತಲೂ ಹೆಚ್ಚು ಸ್ಟೋರೀಸ್ ಹಂಚಿಕೊಳ್ಳಲಾಗಿದೆ. ವಾಟ್ಸ್ಕಟ್ ಪ್ರೊ ಇಂದು ನಿಷೇದಕ್ಕೆ ಒಳಗಾದ ಟಿಕ್ಟಾಕ್ ನ ಪರಿಪೂರ್ಣ ಪರ್ಯಾಯ ಎಂದು ಜನಮನ್ನಣೆ ಪಡೆಯುತ್ತಿದೆ . ಅಲ್ಲದೆ ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಮತ್ತು ಐಎಂಒ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಮತ್ತು ಚಾಟ್ ಮೆಸೆಂಜರ್ಗಳಲ್ಲಿ ವೀಡಿಯೊಗಳು / ಆಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಇದು ಅತ್ಯಂತ ಸುಧಾರಿತ ಅಪ್ಲಿಕೇಶನ್ ಆಗಿದೆ.ಸಂಸ್ಥೆಯ ಹಳೆವಿದ್ಯಾರ್ಥಿಗಳ ಸಾಧನೆಯನ್ನು ಪಿಎ ಎಜುಕೇಷನಲ್ ಟ್ರಸ್ಟ್ ಇದರ ಚೇರ್ಮನ್ ಡಾ.ಪಿ ಎ ಇಬ್ರಾಹಿಂ ಹಾಜಿ , ಕಾರ್ಯನಿರ್ವಾಹಕ ನಿರ್ದೇಶಕರಾದ ಅಬ್ದುಲ್ಲಾ ಇಬ್ರಾಹಿಂ , ಪ್ರಾಂಶುಪಾಲರು ಮತ್ತು ಎಲ್ಲಾ ವಿಭಾಗ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Follow us on Social media