ಜೋಹಾನ್ಸ್ ಬರ್ಗ್: ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪರ ಆಡುವುದು ಅನುಮಾನ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಲಯ ಮತ್ತು ಫಿಟ್‌ನೆಸ್ ಕಾರಣದಿಂದ ಅವರು ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ಡಿವಿಲಿಯರ್ಸ್ ತಂಡದ ಪರ ಆಡಬಲ್ಲರು ಎಂಬ ಸುದ್ದಿ ಹರಿದಾಡಿತ್ತು.
ಅದಕ್ಕೆ ಪೂರಕ ಎಂಬಂತೆ ತರಬೇತುದಾರ ಮಾರ್ಕ್ ಬೌಚರ್ ಸಹ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಿದ್ದರು. ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೋಷಿಸಿದ್ದರು.
Follow us on Social media