ನವದೆಹಲಿ: ಜಾಗತಿಕ ಸಮೂಹ ಸಗಟುಗಳಲ್ಲಿ ಟಾಟಾ ಸಂಸ್ಥೆ ಶೇ.64 ರಷ್ಟು ಕುಸಿತ ದಾಖಲಿಸಿದೆ. ಜಾಗ್ವಾರ್, ಲಾಡ್ ರೋವರ್ ಸೇರಿ ಜೂನ್ ತ್ರೈಮಾಸಿಕದಲ್ಲಿ ಟಾಟಾ ಕುಸಿತ ಕಂಡಿದೆ.
2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಹಾಗೂ ವಾಣಿಜ್ಯ ವಾಹನಗಳು ಹಾಗೂ ಟಾಟಾ ಡೇವೂ ಶ್ರೇಣಿಯ ವಾಹನಗಳು 11,598 ಯುನಿಟ್ ಗಳಷ್ಟು ಮಾರಾಟವಾಗಿದ್ದು ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಶೇ.89 ರಷ್ಟು ಕುಸಿತ ಕಂಡಿದೆ.
ಜಾಗತಿಕ ಮಟ್ಟದ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಜೂನ್ ತ್ರೈಮಾಸಿಕದಲ್ಲಿ ಶೇ.49 ರಷ್ಟು ಕುಸಿತ ಕಂಡಿದ್ದು 79,996 ಯುನಿಟ್ ಗಳಷ್ಟು ಮಾರಾಟವಾಗಿದೆ. ಜೂನ್ ತ್ರೈಮಾಸಿಕದಲ್ಲಿ ಜೆಎಲ್ ಆರ್ ಜಾಗತಿಕವಾಗಿ 65,425 ವಾಹನಗಳು, ಜಾಗ್ವಾರ್ ಇದೇ ಅವಧಿಯಲ್ಲಿ 17,971 ವಾಹನಗಳು ಮಾರಾಟವಾಗಿದೆ. ಲ್ಯಾಂಡ್ ರೋವರ್ 47,454 ವಾಹನಗಳು ಮಾರಾಟವಾಗಿವೆ.
Follow us on Social media