ನವದೆಹಲಿ: ಇ-ಕಾಮರ್ಸ್ ವಿಭಾಗದಲ್ಲಿ ಈಗಾಗಲೇ ಪ್ರಬಲವಾಗಿರುವ ಅಮೇಜಾನ್ ಈಗ ಭಾರತದ ಸಿದ್ಧಪಡಿಸಿದ ಆಹಾರ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ.
ಅಮೇಜಾನ್ ಫುಡ್ ನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿರುವ ಅಮೇಜಾನ್, ತಾನು ನಿಗದಿಪಡಿಸಿರುವ ಅತ್ಯುತ್ತಮವಾದ ಕೆಲವೇ ಕೆಲವು ಸ್ಥಳೀಯ ರೆಸ್ಟೋರೆಂಟ್ ಗಳಿಂದ ಆಹಾರ ಪೂರೈಕೆ ಮಾಡುತ್ತದೆ.
ಅಮೇಜಾನ್ ನಲ್ಲಿ ವ್ಯವಹರಿಸುವ ಗ್ರಾಹಕರು ಸಿದ್ಧಪಡಿಸಿದ ಆಹಾರ ಪೂರೈಕೆ ವ್ಯವಸ್ಥೆಗೂ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಅಮೇಜಾನ್ ವಕ್ತಾರರು ತಿಳಿಸಿದ್ದಾರೆ.
Follow us on Social media